International

INDIAN STUDENTS: ರೊಮಾನಿಯಾ ತಲುಪಿದ ಏರ್‌ ಇಂಡಿಯಾ ವಿಮಾನ

ಬುಚರೆಸ್ಟ್‌; ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಉಕ್ರೇನ್‌ ಪಕ್ಕದ ರೊಮಾನಿಯಾ ಮೂಲಕ ವಿದ್ಯಾರ್ಥಿಗಳನ್ನು ಏರ್‌ಲಿಫ್ಟ್‌ ಮಾಡಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಈಗಾಗಲೇ ಒಂದು ಏರ್‌ ಇಂಡಿಯಾ ಎಐ-1943 ವಿಮಾನ ರೊಮಾನಿಯಾದ ಬುಚರೆಸ್ಟ್‌ ವಿಮಾನ ನಿಲ್ದಾಣ ತಲುಪಿದೆ. 

ಉಕ್ರೇನ್‌ನಲ್ಲಿರುವ ಕೆಲ ಭಾರತೀಯ ವಿದ್ಯಾರ್ಥಿಗಳು ಈಗಾಗಲೇ ರೊಮಾನಿಯಾ ಗಡಿ ತಲುಪಿದ್ದಾರೆ. ಅವರನ್ನು ರೊಮಾನಿಯಾ ಅಧಿಕಾರಿಗಳ ನೆರವಿನೊಂದಿಗೆ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತದೆ. ಅಲ್ಲಿಂದ ಏರ್‌ ಲಿಫ್ಟ್‌ ಮಾಡಲಾಗುತ್ತದೆ. ಉಕ್ರೇನ್‌ ಸರ್ಕಾರ ಹಾಗೂ ಅಲ್ಲಿನ ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳನ್ನು ಸೇಫಾಗಿ ಭಾರತಕ್ಕೆ ಕಳುಹಿಸಲು ಸಹಕರಿಸುತ್ತಿವೆ. ಕೆಲವು ವಿಶ್ವವಿದ್ಯಾಲಯಗಳು ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ರೊಮಾನಿಯಾ ಗಡಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಕೆಲ ವಿದ್ಯಾರ್ಥಿಗಳು ನಡೆದುಕೊಂಡೇ ರೊಮಾನಿಯಾ ಗಡಿ ತಲುಪಿದ್ದಾರೆ. ಇನ್ನು ಭಾರತದ ಸರ್ಕಾರವೇ ಉಚಿತವಾಗಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲು ತೀರ್ಮಾನ ಮಾಡಿದೆ. ಇನ್ನೊಂದು ವಿಮಾನವೂ ಶೀಘ್ರದಲ್ಲೇ ರೊಮಾನಿಯಾಗೆ ಹಾರಲಿದೆ.

Share Post