International

Infosys ನಾರಾಯಣ ಮೂರ್ತಿ ಅಳಿಯ ಆಗ್ತಾರಾ ಬ್ರಿಟನ್‌ ಪ್ರಧಾನಿ ?

ಲಂಡನ್‌ : ಬ್ರಿಟನ್‌ ಪ್ರಧಾನಿ ಆಗಿರುವ ಬೋರಿಸ್‌ ಜಾನ್ಸನ್‌ ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಕೂಗು ಅವರ ಪಕ್ಷದೊಳಗೆ ಪ್ರಬಲವಾಗಿ ಕೇಳಿ ಬರುತ್ತಿದೆ. ಪ್ರಧಾನಿ ಸ್ಥಾನಕ್ಕೆ ಭಾರತ ಮೂಲದ ರಿಷಿ ಸುನಕ್‌ ಅವರ ಹೆಸರು ಕೇಳಿ ಬರುತ್ತಿದೆ. ರಿಷಿ ಸುನಕ್‌ ಅವರು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ.

ರಿಷಿ ಅವರು 2015ರಲ್ಲಿ ಬ್ರಿಟೀಷ್‌ ಸಂಸತ್‌ಅನ್ನು ಪ್ರವೇಶಿಸಿದ್ದರು, 2020ರಲ್ಲಿ ಬ್ರಿಟನ್‌ ಸಚಿವ ಸಂಪುಟ ಸಭೆಯಲ್ಲಿ ಹಣಕಾಸು ಹುದ್ದೆ ಅಲಂಕರಿಸಿದ್ದರು.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ರಿಚಿ ಸುನಕ್‌ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಉದ್ಯೋಗ ಮತ್ತು ಉದ್ಯಮ ವಲಯಕ್ಕೆ ಅನುಕೂಲ ಮಾಡಿಕೊಡಲು ಹಲವು ಯೋಜನೆಗಳನ್ನು ಕೈಗೊಂಡಿದ್ದಾರೆ. ಇದೆಲ್ಲವೂ ಅವರನ್ನು ಪ್ರಧಾನಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಿಸಿದೆ.

Share Post