ಅನುಮಾನಾಸ್ಪದವಾಗಿ ಕಂಡ ಕೋಳಿ-ಅಮೆರಿಕಾ ಪೊಲೀಸರ ಬಂಧಿಯಲ್ಲಿ
ಅಮೆರಿಕಾ: ರಕ್ಷಣಾ ಇಲಾಖೆಯವರಿಗೆ ಏನ್ ನೋಡಿದ್ರೂ ಅನುಮಾನವಾಗಿಯೇ ಕಾಣುತ್ತೆ..ಮನುಷ್ಯರನ್ನ ಹಿಡಿಯೋದು ಸಹಜ ಆದ್ರೆ ಪ್ರಾಣಿಗಳನ್ನು ಅನುಮಾನಿಸಿ ಬಂಧಿಸುವುದನ್ನು ಎಲ್ಲಾದ್ರೂ ನೋಡಿದ್ದೀರಾ..?ಹೌದು ನಿಜ…ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ ಬಳಿ ಕೋಳಿಯೊಂದು ಅನುಮಾನಾಸ್ಪದವಾಗಿ ಓಡಾಡುತ್ತಿದೆ ಅಂತ ಅದನ್ನು ಯುಎಸ್ ಪೊಲೀಸರು ಬಂಧಿಸಿದ್ದಾರೆ. ಆ ಕೋಳಿ ಯಾರದ್ದು? ಅಷ್ಟೊಂದು ಭದ್ರತಾ ಪ್ರದೇಶಕ್ಕೆ ಆ ಕೋಳಿ ಹೇಗೆ ಬಂತು?ಈ ಕೋಳಿ ಹಿಂದೆ ಉಗ್ರರ ಕೈವಾಡವಿದೆಯೇ?ಎಂದು ಪರಿಶೀಲನೆ ನಡೆಸಿದ್ದಾರಂತೆ.
ಅಮೆರಿಕದ ಪೆಂಟಗಾನ್ ಭದ್ರತಾ ಪ್ರದೇಶದಲ್ಲಿ ಸಂಚರಿಸುತ್ತಿರುವ ಶಂಕಿತ ಕೋಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನು ವರ್ಜೀನಿಯಾದ ಆರ್ಲಿಂಗ್ಟನ್‌ನ ಪ್ರಾಣಿ ಕಲ್ಯಾಣ ಸಂಘವು ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿದೆ. ಫೆಬ್ರವರಿ 1,2022ರ ಬೆಳಿಗ್ಗೆ, ಯುಎಸ್ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯ ಬಳಿ ಕೋಳಿಯೊಂದು ಅಲೆದಾಡುತ್ತಿರುವುದನ್ನು ಗಮನಿಸಿ, ಪೋಸ್ಟ್ ಹಾಕಿದ್ದಾರೆ.
ಅನಿಮಲ್ ವೆಲ್ಫೇರ್ ಅಸೋಸಿಯೇಷನ್‌ನ ಉದ್ಯೋಗಿಯೊಬ್ಬರು ತಮ್ಮ ಫೇಸ್‌ಬುಕ್ ಪುಟದಲ್ಲಿ ಕೋಳಿಯೊಂದು ಭದ್ರತಾ ಚೆಕ್‌ಪೋಸ್ಟ್‌ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದೆ ಎಂಬ ಮಾಹಿತಿ ತಿಳಿದ ಕೂಡಲೇ ಅದನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಕಂದು ಬಣ್ಣದ ಗರಿಗಳಿರುವ ಈ ಕೋಳಿಗೆ ಹೆನ್ನಿ ಪೆನ್ನಿ ಎಂದು ಹೆಸರಿಡಲಾಗಿದೆ. ಆ ಕೋಳಿ ಎಲ್ಲಿಂದ ಬಂತು? ಪೆಂಟಗನ್ ಅಲ್ಲಿಗೆ ಹೇಗೆ ಬಂದಿತು?ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಏನೂ ಹೇಳಿಲ್ಲ.
ಆದರೆ ಅಮಾಯಕ ಕೋಳಿಯನ್ನು ಅನುಮಾನಾಸ್ಪದವಾಗಿ ಅಮೆರಿಕದ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ನಗಿಸುತ್ತಿದೆ. ಆದರೆ ವೆಸ್ಟ್ ವರ್ಜೀನಿಯಾದಲ್ಲಿನ ಕೋಳಿ ಫಾರ್ಮ್‌ನಿಂದ ಕೋಳಿ ತಪ್ಪಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಈ ಕೋಳಿ ಈ ರೈತನಿಗೆ ಅಚ್ಚುಮೆಚ್ಚಿನದು. ಅದಕ್ಕೇ ಅದಕ್ಕೆ ಹೆನ್ನಿ ಪೆನ್ನಿ ಎಂದು ಹೆಸರಿಟ್ಟು ಆ ಕೋಳಿಯನ್ನು ದತ್ತು ತೆಗೆದುಕೊಂಡಿದ್ದರಂತೆ ಅಲ್ಲಿಂದ ತಪ್ಪಿಸಿಕೊಂಡು ಬಂದಿರಬಹುದು ಎಂಬ ಸುದ್ದಿಗಳೂ ಹರಿದಾಡುತ್ತಿವೆ.