National

ತಿಮ್ಮಪ್ಪನ ದರ್ಶನಕ್ಕೆ ಸಾಮಾನ್ಯ ಭಕ್ತರಿಗಿಲ್ಲ ಅವಕಾಶ: ಟಿಟಿಡಿ ವಿರುದ್ಧ ಆಕ್ರೋಶ

ತಿರುಪತಿ: ಏಡುಕೊಂಡಲವಾಡ ವೆಂಕಟರಮಣ ದೇಗುಲದಲ್ಲಿ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡದ ಕಾರಣ ಭಕ್ತರು ಆಡಳಿತ ಮಂಡಳಿ ವಿರುದ್ಧ ತಿರುಗಿಬಿದ್ದಿದ್ದಾರೆ. ಕೇವಲ ಸಾವಿರ ಸಾವಿರ ಕೊಟ್ಟು ಬಂದ ವಿಐಪಿಗಳಿಗೆ ರಾಜಮರ್ಯಾದೆ ನೀಡಿ ದರ್ಶನಕ್ಕೆ ಅನುಮತಿ ನೀಡ್ತಿದ್ದಾರೆ. ಆದರೆ ಸಾಮಾನ್ಯ ಜನ ಕಾಲ್ನಡಿಗೆಯಲ್ಲಿ ಬಂದು ಲೋಕಲ್‌ ಟಿಕೆಟ್‌ ಪಡೆದು ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತರು ಕ್ಯಾರೆ ಅನ್ನುತ್ತಿಲ್ಲ. ನಿರೀಕ್ಷಣಾ ಕೊಠಡಿಯಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲ, ಊಟ, ನೀರಿನ ವ್ಯವಸ್ಥೆ ಇಲ್ಲದೆ ಭಕ್ತರು ಪರದಾಡುವ ಪರಿಸ್ಥಿತಿ ಬಂದಿದೆ.

ತಿಮ್ಮಪ್ಪನ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಯಿಂದ ಭಕ್ತರು ಬಂದಿದ್ದಾರೆ. ಪುಟ್ಟ ಮಕ್ಕಳನ್ನು ಎಕ್ತೊಂಡು ಎಷ್ಟು ಸಮಯ ಹೀಗೆ ಕಾಯೋದು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದು ವಿಐಪಿ ಭಕ್ತರಿಗೆ ಮಾತ್ರ ಇಂತಹ ದುಸ್ಥಿತಿ ಬಂದಿಲ್ಲ. ಅವರು ಹಣ ಕೊಡ್ತಾರೆ ಎಂಬ ಕಾರಣಕ್ಕೆ ಬಂದ ಕೂಡಲೇ ದರ್ಶನಕ್ಕೆ ಅವಕಾಣ ಕಲ್ಪಿಸಿ ಕೊಡ್ತಿದಾರೆ. ಎರಡು ಮೂರು ದಿನಗಳಿಂದ ಕೂತಲ್ಲೇ ಕೂತಿದ್ದೇವೆ. ದರ್ಶನದ ಹೆಸರಲ್ಲಿ ಆಡಳಿತ ಮಂಡಳಿ ದರೋಡೆ ಮಾಡ್ತಿದಾರೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಭಕ್ತರು ಧರಣಿ ನಡೆಸಿದ್ದಾರೆ.

ಕೇವಲ ಬುಕಿಂಗ್‌ ಮತ್ತು ಆನ್ಲೈನ್ ಟಿಕೆಟ್‌ ಮಾತ್ರ ಅನುಮತಿ ಅಂತ ತಿಳಿಸಿದ್ರೆ ನಾವು ದೂರದಿಂದ ಬರುವ ಅವಶ್ಯಕತೆ ಇರಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ನೂರಾರು ಜನರನ್ನು ಒಂದೆಡೆ ಕೂಡಿ ಹಾಕಿದ್ರೆ ಕೊರೊನಾಕ್ಕೆ ಆಹ್ವಾನ ನೀಡದಂತೆ ಆಗಲ್ವಾ ಇದೇನಾ ಸರ್ಕಾರ ಪಾಲಿಸುವ ನಿಯಮಗಳು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

 

 

Share Post