International

ವ್ಲಾಡಿಮಿರ್‌ ಪುಟಿನ್‌ಗೆ ಕ್ಯಾನ್ಸರ್‌; ಅಧಿಕಾರಿ ಹಸ್ತಾಂತರಿಸುತ್ತಾರಾ ರಷ್ಯಾ ಅಧ್ಯಕ್ಷ..?

ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕೆಂದು ವೈದ್ಯರು ಹೇಳಿರುವುದಾಗಿ ಅಮೆರಿದ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ ಕೂಡಾ ವರದಿ ಮಾಡಿದ್ದು, ಪುಟಿನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಹೀಗಾಗಿ, ತಾತ್ಕಾಲಿಕವಾಗಿ ದೇಶದ ಭದ್ರತಾ ಮಂಡಳಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೇವ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಪುಟಿನ್‌ ಶಸ್ತ್ರಚಿಕಿತ್ಸೆಗೆ ಒಳಗಾದರೆ, ಕೆಲಕಾಲ ಅವರು ರೆಸ್ಟ್‌ ಪಡೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಹೀಗಾಗಿ ಆ ಸಮಯದಲ್ಲಿ ಅವರು ಸಂಪೂರ್ಣವಾಗಿ ಅಧಿಕಾರದಿಂದ ದೂರ ಉಳಿಯಬೇಕಾಗುತ್ತದೆ. ಹೀಗಾಗಿ ಅವರು, ಕೆಲಕಾಲ ಅಧಿಕಾರ ಹಸ್ತಾಂತರಕ್ಕೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ರಷ್ಯಾದ ಅಧ್ಯಕ್ಷರು ಕ್ಯಾನ್ಸರ್ ಮತ್ತು ಪಾರ್ಕಿನ್ಸನ್ ಸೇರಿದಂತೆ ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳು ಕೂಡಾ ಹಬ್ಬಿವೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಮಾತ್ರ ಹೊರಬಿದ್ದಿಲ್ಲ.

Share Post