ಶ್ರೀಲಂಕಾದಲ್ಲಿ ಜೋರಾಯ್ತು ಜನರ ದಂಗೆ; ಪ್ರಧಾನಿ ಕುರ್ಚಿ ಕಾಯುತ್ತಿರುವ ಯೋಧರು..!
ಕೊಲಂಬೊ; ಶ್ರೀಲಂಕಾ ಅಯೋಮಯವಾಗಿದೆ. ಈ ದೇಶದ ಅಧ್ಯಕ್ಷರು ಪಲಾಯನ ಮಾಡಿದ್ದಾರೆ. ಪ್ರಧಾನಿ ಕೂಡಾ ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇನ್ನು ಪ್ರಧಾನಿ ಕುರ್ಚಿಯನ್ನು ಕಾಯುವ ಸ್ಥಿತಿ ಅಲ್ಲಿನ ಯೋಧರದ್ದು. ಶ್ರೀಲಂಕಾ ನಾಗರಿಕರು ಸರ್ಕಾರದ ವಿರುದ್ಧ ದಂಗೆ ಎದ್ದು, ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ್ದರು. ಕೆಲ ದಿನನಗಳಿಂದ ಅಲ್ಲೇ ಠಿಕಾಣಿ ಹೂಡಿದ್ದಾರೆ. ಇದೀಗ ಪ್ರಧಾನಿ ನಿವಾಸಕ್ಕೂ ಜನರು ಲಗ್ಗೆ ಇಟ್ಟಿದ್ದಾರೆ. ಹೀಗಾಗಿ ಸೇನೇ ಸಿಬ್ಬಂದಿ, ಪ್ರಧಾನಿ ಕುರ್ಚಿಯನ್ನು ಕಾಯುತ್ತಿದ್ದಾರೆ.
ಜನರ ಆಕ್ರೋಶದ ಕಿಚ್ಚಿಗೆ ಹೆದರಿ ಅಧ್ಯಕ್ಷ ಗೊಟಬಯ ರಾಜಪಕ್ಸ ದೇಶ ಬಿಟ್ಟು ತೆರಳಿದ್ದರೆ. ಇತ್ತ, ಪ್ರಭಾರಿ ಅಧ್ಯಕ್ಷ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕುರ್ಚಿಯನ್ನು ಮಿಲಿಟರಿ ಕಾವಲು ಕಾಯುತ್ತಿದೆ.