International

ರೈಲ್ವೆ ಹಳಿ ಮೇಲೆ ಬಿದ್ದ ವಿಮಾನ: ಸಿನಿಮೀಯ ರೀತಿಯಲ್ಲಿ ಪೈಲಟ್‌ ರಕ್ಷಣೆ

ಅಮೆರಿಕಾ: ಈ ದೃಶ್ಯ ನೋಡಿದ್ರೆ ಎಧೆ ಝಲ್‌ ಎನ್ನುತ್ತೆ. ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಲಾಸ್‌ ಏಂಜಲೀಸ್‌ ಪೊಲೀಸರು ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಯಿಂದ ಒಂದು ಜೀವ ಬದುಕಿದೆ. ಟೇಕಾಫ್‌ ಹಂತದಲ್ಲಿದ್ದ ವಿಮಾನ ತಾಂತ್ರಿಕ ಸಮಸ್ಯೆಯಿಂದ ರೈಲ್ವೆ ಹಳಿ ಮೇಲೆ ಬಿದ್ದರುವ ಘಟನೆ ಲಾಸ್‌ ಏಂಜಲೀಸ್‌ನಲ್ಲಿ ನಡೆದಿದೆ. ಹಿಂದೆಯಿಂದ ರೈಲು ಬರುತ್ತಿರುವುದನ್ನು ಗಮನಿಸಿದ ಪೊಲೀಸರು ಕೂಡಲೇ ಪೈಲಟ್‌ ರಕ್ಷಣೆಗೆ ಧಾವಿಸಿದ್ದಾರೆ.

ರೈಲ್ವೆ ಹಳಿ ಮೇಲೆ ಬಿದ್ದ ಕೂಡಲೇ ಪೈಲಟ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರಕ್ಷಿಸಲು ಧಾವಿಸಿದ ಪೊಲೀಸರನ್ನು ರೈಲು ಬರುತ್ತಿರುವುದು ಕಂಡು ಡೋಂಟ್‌ ಕಮ್..ಗೋ ಗೋ ಎಂದಿರುವ ಆಡಿಯೋ ರೆಕಾರ್ಡ್‌ ಕೂಡ ಆಗಿದೆ. ಕೂದಲೆಳೆ ಅಂತರದಲ್ಲಿ ಪೈಲಟ್‌ ರಕ್ಷಣೆ ಮಾಡಿದ ಪೊಲೀಸರಿಗೆ ಜನ ಹ್ಯಾಟ್ಸಾಪ್‌ ಅನ್ನುತ್ತಿದ್ದಾರೆ. ಅದೃಷ್ಟವಶಾತ್‌ ಗಾಯಗಳಿಂದ ಪೈಲಟ್ವ ಆಸ್ಪತ್ರೆ ಸೇರಿದ್ದಾರೆ. ಸ್ವಲ್ಪ ತಡವಾಗಿದ್ದರೂ ರೈಲಿನ ವೇಗಕ್ಕೆ ಪೈಲಟ್‌ ದೇಹ ಛಿದ್ರ ಛಿದ್ರವಾಗುತ್ತಿದ್ದರಲ್ಲಿ ಎರಡು ಮಾತಿಲ್ಲ.

Share Post