HealthInternational

ಜೂಜಾಟದಲ್ಲಿ ಬರೋಬ್ಬರಿ 33 ಕೋಟಿ ರೂ. ಗೆದ್ದ; ಖುಷಿಯಲ್ಲಿ ಡ್ಯಾನ್ಸ್‌ ಆಡುತ್ತಾ ಕುಸಿದುಬಿದ್ದು ಸತ್ತ!

ಒಂದು ಕಡೆ ಅದೃಷ್ಟ.. ಮತ್ತೊಂದು ಕಡೆ ದೌರ್ಬಾಗ್ಯ.. ಒಬ್ಬ ವ್ಯಕ್ತಿಗೆ ಕೆಸಿನೋದಲ್ಲಿ 33 ಕೋಟಿ ರೂಪಾಯಿ ಬಂದಿದೆ.. ಅದರ ಖುಷಿಯಲ್ಲಿ ಆತ ಅಲ್ಲಿಯೇ ಡ್ಯಾನ್ಸ್‌ ಆಡುತ್ತಿದ್ದ.. ಆದ್ರೆ ವಿಧಿ ಆತನಿಗೆ ಬೇರೆಯದೇ ಬರೆದಿತ್ತು.. ಖುಷಿಯಿಂದ ಡ್ಯಾನ್ಸ್‌ ಮಾಡುತ್ತಿರುವಾಗಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ..

ಸಿಂಗಾಪುರದ ಮೆರಿನಾ ಬೇ ಕ್ಯಾಸಿನೋದಲ್ಲಿ ಒಬ್ಬ ವ್ಯಕ್ತಿಗೆ 4 ಮಿಲಿಯನ್ ಡಾಲರ್ (33,38,19,200) ಜಾಕ್‌ಪಾಟ್ ಹೊಡೆದಿತ್ತು. ಇಷ್ಟು ದೊಡ್ಡ ಮೊತ್ತದ ಹಣ ಗೆದ್ದ ಖುಷಿ ಹೆಚ್ಚು ಹೊತ್ತು ಉಳಿಯದೆ ಹೃದಯಾಘಾತವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಕ್ಯಾಸಿನೊ ಜೂಜಾಟದಲ್ಲಿ 4 ಮಿಲಿಯನ್ ಡಾಲರ್ ಗೆದ್ದ ವ್ಯಕ್ತಿಯೊಬ್ಬ ಜಾಕ್ ಪಾಟ್ ಹೊಡೆದ ಸಂಭ್ರಮದಲ್ಲಿ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಿಂಗಾಪುರದ ಮರೀನಾ ಬೇ ಕ್ಯಾಸಿನೊದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತಾರಲ್ಲ, ಈತನ ಪರಿಸ್ಥಿತಿ ಕೂಡಾ ಹಾಗೇ ಆಗಿದೆ.. 33 ಕೋಟಿ ರೂಪಾಯಿ ಗೆದ್ದರೂ ಅದರಲ್ಲಿ ಒಂದು ರೂಪಾಯಿಯನ್ನೂ ಅನುಭವಿಸೋಕೆ ಆಗದೇ ಸಾವನ್ನಪ್ಪಿದ್ದಾನೆ..  ಆ ವ್ಯಕ್ತಿಗೆ ಅದೃಷ್ಟ ಒಲಿದು ಬಂದರೂ ಲಕ್ಷ್ಮಿ ದೇವಿಯ ಕೃಪೆಯಿಂದ ಅಪಾರ ಧನ ಭಾಗ್ಯ ಲಭಿಸಿದರೂ ಅನುಭವಿಸುವ ಭಾಗ್ಯ ಸಿಗಲಿಲ್ಲ.

Share Post