ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಶೂಟ್‌ಔಟ್; ಮೂವರು ವಿದ್ಯಾರ್ಥಿಗಳು ಬಲಿ
ವಾಷಿಂಗ್ಟನ್: ಇಲ್ಲಿನ ಮಿಚಿಗನ್ ಬಳಿಯ ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ಸುರಿಮಳೆಗೈದಿದ್ದಾರೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆಂದು ತಿಳಿದುಬಂದಿದೆ. ಮಿಚಿಗನ್ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಿಚಿಯಗನ್ ಹೊರವಲಯದ ಉತ್ತರ ಡೆಟ್ರಾಯ್ಟ್ ನಗರದಲ್ಲಿ ಈ ಕೃತ್ಯ ಎಸಲಾಗಿದೆ. ಘಟನೆಯಲ್ಲಿ ಶಿಕ್ಷಕರೊಬ್ಬರು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಹೈಸ್ಕೂಲ್ ದ್ವಿತೀಯ ವರ್ಷದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದು, ಬಂದೂಕನ್ನು ಜಪ್ತಿ ಮಾಡಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿ ಬಾಲಕನ ಬಂಧನದ ವೇಳೆ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ ಮತ್ತು ಘಟನೆಗೆ ಕಾರಣವೇನೆಂದು ಕೂಡ ಹೇಳಿಲ್ಲ ಎಂದು ಷೆರಿಫ್ ಕಚೇರಿ ತಿಳಿಸಿದೆ. ಆರೋಪಿ ಸೆಮಿ ಆಟೋಮ್ಯಾಟಿಕ್ ಹ್ಯಾಂಡ್‌ಗನ್‌ನಿಂದ 5 ನಿಮಿಷದಲ್ಲಿ 15-20 ಬಾರಿ ಗುಂಡು ಹಾರಿಸಿದ್ದಾನೆ ಎಂದು ಗೊತ್ತಾಗಿದೆ. ಘಟನೆ ನಡೆದ ಕೂಡಲೇ 911ಗೆ ನೂರಕ್ಕೂ ಹೆಚ್ಚು ತುರ್ತು ಕರೆಗಳು ಬಂದಿವೆ. ಕರೆ ಬಂದ 5 ನಿಮಿಷದಲ್ಲೇ ಆರೋಪಿ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.