International

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಜ್‌ ಷರೀಫ್‌ ಆಯ್ಕೆ; ರಾತ್ರಿ ಪ್ರಮಾಣವಚನ

ಇಸ್ಲಾಮಾಬಾದ್​(ಪಾಕಿಸ್ತಾನ): ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಜ್‌ ಷರೀಫ್‌ ಆಯ್ಕೆಯಾಗಿದ್ದಾರೆ. ಇಮ್ರಾನ್‌ ಖಾನ್‌ ಪದಚ್ಯುತಿ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆದಿದೆ. ಪಿಎಂಎಲ್‌-ಎನ್‌ ನಾಯಕ ಶೆಹಬಾಜ್‌ ಷರೀಫ್‌ ಪಾಕಿಸ್ತಾನದ 23 ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ರಾತ್ರಿ 8.30ಕ್ಕೆ ನಡೆಯುವ ಸಮಾರಂಭದಲ್ಲಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

     342 ಸದಸ್ಯ ಬಲದ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಪಿಟಿಪಿ ಪಕ್ಷದ ನಾಯಕ ಇಮ್ರಾನ್ ಖಾನ್ ವಿಶ್ವಾಸ ಮತಯಾಚನೆ ವೇಳೆ ಸೋಲು ಕಂಡಿದ್ದರು. ಇದೀಗ 174 ಸದಸ್ಯರ ಬೆಂಬಲ ಹೊಂದಿರುವ ಶಹಬಾಜ್​ ಷರೀಫ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇತ್ತ ಪದಚ್ಯುತ ಪ್ರಧಾನಿ ಇಮ್ರಾನ್‌ ಖಾನ್‌ ಆಪ್ತ ಪವಾದ್‌ ಚೌದರಿ ಟ್ವೀಟ್‌ ಮಾಡಿದ್ದಾರೆ. ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌) ಪಕ್ಷದ ಎಲ್ಲ ಸಂಸದರು ರಾಷ್ಟ್ರೀಯ ಸಂಸತ್ತಿಗೆ ರಾಜೀನಾಮೆ ನೀಡಲು ನಮ್ಮ ಪಕ್ಷದ ಸಂಸದೀಯ ಸಮಿತಿ ನಿರ್ಧರಿಸಿದೆ. ಇಂದೇ ನಮ್ಮ ಪಕ್ಷದ ಎಲ್ಲ ಸಂಸದರು ರಾಜೀನಾಮೆ ಸಲ್ಲಿಸಲಿದ್ದಾರೆ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

Share Post