InternationalLifestyle

ಹಿಮ ಪರ್ವತದ ಮೇಲೆ ನಡೆಯಿತು ವಿಶೇಷ ಮದುವೆ; ವಧು ಎಂಟ್ರಿಯೇ ರೋಮಾಂಚನ!

ಮದುವೆ ಅನ್ನೋದು ಒಂದು ಸಂಪ್ರದಾಯವಾಗಿ ಈಗ ಉಳಿದಿಲ್ಲ.. ಅದೊಂದು ಪ್ರೆಸ್ಟೀಜ್‌ ಆಗಿದೆ.. ಅಷ್ಟೇ ಏಕೆ, ಜನರ ಗಮನ ಸೆಳೆಯೋದಕ್ಕೆ ಮದುವೆಗಳನ್ನು ವಿಭಿನ್ನ, ವಿಶೇಷ ರೀತಿಯಲ್ಲಿ ನಡೆಸಲಾಗುತ್ತಿದೆ.. ಆಕಾಶದಲ್ಲಿ, ವಿಮಾನದಲ್ಲಿ, ಸಮುದ್ರದಾಳದಲ್ಲಿ ಹೀಗೆ ನಾನಾ ಕಡೆ ಮದುವೆಗಳನ್ನು ಆಯೋಜಿಸಿದ್ದನ್ನು ನಾವು ಕಾಣಬಹುದು.. ಇತ್ತೀಚೆಗೆ ಮದುವೆಗಳನ್ನು ವಿಭಿನ್ನವಾಗಿ ಮಾಡಿಕೊಳ್ಳಬೇಕೆಂದು ಎಲ್ಲರೂ ಬಯಸುತ್ತಾರೆ.. ಅದರಂತೆ ವಿಶೇಷವಾಗಿ ಯೋಚನೆ ಮಾಡುತ್ತಾರೆ.. ಅದೇ ರೀತಿಯ ನವಜೋಡಿ ವಿನೂತನ ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದು, ಪ್ರಪಂಚದ ಜನರನ್ನು ಆಕರ್ಷಿಸಿದೆ..

ಸಮುದ್ರ ಮಟ್ಟದಿಂದ ಸುಮಾರು 2222 ಮೀಟರ್‌ ಎತ್ತರದಲ್ಲಿ ಈ ಮದುವೆ ನಡೆದಿದೆ..  ಸ್ವಿಟ್ಜರ್ಲೆಂಡ್‌ನ ಝೆರ್ಮಾಟ್‌ನಲ್ಲಿರುವ ಐಷಾರಾಮಿ ಸ್ಕೀ ನಲ್ಲಿ ಈ ಮದುವೆ ನಡೆದಿದೆ.. ಇದರಲ್ಲಿ ನವವಧು ಹಿಮದ ಮಧ್ಯದಿಂದ ಹೊರಬರುತ್ತಾಳೆ.. ಇದನ್ನು ತುಂಬಾ ಸುಂದರವಾಗಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.. ಪಿಟೀಲು ವಾದಕರ ಪ್ರದರ್ಶನದ ನಡುವೆ ವಧು-ವರರಿಬ್ಬರೂ ಹಿಮ ದೇವತೆಗಳ ವೇಷ ಧರಿಸಿ ಕಾಣಿಸಿಕೊಂಡಿದ್ದಾರೆ.. ಆ ಸಮಯದಲ್ಲಿ ಅಲ್ಲಿ ವಿಶೇಷ ಸಂಗೀತ ಮೊಳಗುತ್ತದೆ.. ಇದರ ನಡುವೆ ಗಂಭೀರವಾದ ವಧುವಿನ ಪ್ರವೇಶವು ಎಲ್ಲರನ್ನೂ ಬೆರಗುಗೊಳಿಸುತ್ತದೆ.

ಈ ಫೋಟೋಗಳನ್ನು Instagram ನಲ್ಲಿ LebaneseWeddings ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿದ್ದು, ಕಾಮೆಂಟ್ ಮಾಡುತ್ತಿದ್ದಾರೆ.

Share Post