ಕೋವಿಡ್ ಹೊಸ ತಳಿಗಳು ಬರುತ್ತಲೇ ಇರುತ್ತವೆ; ಎನ್.ಕೆ.ಆರೋರಾ
ನವದೆಹಲಿ: ಕೋವಿಡ್-19ರ ರೂಪಾಂತರಿ ಸೋಂಕುಗಳು ಸಂಭವಿಸುತ್ತಲೇ ಇರುತ್ತವೆ. ಅದರ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದು ಎನ್.ಕೆ.ಆರೋರಾ ತಿಳಿಸಿದ್ದಾರೆ. ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಕೋವಿಡ್ನ ಹೊಸ ತಳಿ ಎಕ್ಸ್ಇ ಪತ್ತೆಯಾದ ಬೆನ್ನಲ್ಲೆ ಅವರು ಪ್ರತಿಕ್ರಿಯಿಸಿದರು.
ಒಮಿಕ್ರಾನ್ನ ಹೊಸ ತಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಪತ್ತೆಯಾದ ಎಕ್ಸ್ಇ ಎಕ್ಸ್ ಸರಣಿಯ ರೂಪಾಂತರಿಯಾಗಿದೆ. ಇಂತಹ ತಳಿಗಳು ಹುಟ್ಟುತ್ತಿರುತ್ತವೆ. ಜನರು ಆತಂಕಪಡುವ ಅಗತ್ಯ ಇಲ್ಲ. ಭಾರತದಲ್ಲಿ ಇದುವರೆಗೆ ದಾಖಲಾದ ಮಾಹಿತಿ ಪ್ರಕಾರ, ಈ ತಳಿ ಅಷ್ಟೊಂದು ವೇಗವಾಗಿ ಹರಡದು. ಎಕ್ಸ್ಇ ತಳಿಯು ಮೊದಲ ಹಂತದ ಪರೀಕ್ಷೆಯ ಭಾಗವಾಗಿದೆ. ಒಂದೇ ಪರೀಕ್ಷೆಯಿಂದ ಹೊಸ ತಳಿ ಬರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ ಎಂದರು. ಕಳೆದ ತಿಂಗಳು ಮುಂಬೈನಿಂದ ಗುಜರಾತ್ನ ವಡೋದರಾಗೆ ಪ್ರಯಾಣಿಸಿದ್ದ 67 ವರ್ಷದ ವ್ಯಕ್ತಿಯಲ್ಲಿ ಇತ್ತೀಚೆಗೆ ಎಕ್ಸ್ಇ ಸೋಂಕು ಪತ್ತೆಯಾಗಿತ್ತು.