EconomyInternational

4ನೇ ಅತಿದೊಡ್ಡ ತೈಲ ಉತ್ಪಾದನಾ ದೇಶವಾಗುತ್ತಾ ಪಾಕಿಸ್ತಾನ..?

ಇಸ್ಲಾಮಾಬಾದ್; ಪಾಕಿಸ್ತಾನ ಆರ್ಥಿಕವಾಗಿ ಅದಃಪತನಕ್ಕಿಳಿದಿದೆ. ಒಂದೊಂದು ರೂಪಾಯಿಗೂ ಪರದಾಡುತ್ತಿರುವ ಪಾಕಿಸ್ತಾನಕ್ಕೆ ಈಗ ಹೊಸ ಚೈತನ್ಯ ಬಂದಂತೆ ಕಾಣುತ್ತಿದೆ.. ವಿಶ್ವದ ನಾಲ್ಕನೇ ಅತಿದೊಡ್ಡ ತೈಲ ಉತ್ಪಾದನಾ ದೇಶವಾಗಿ ಪಾಕಿಸ್ತಾನ ಹೊರಹೊಮ್ಮುತ್ತೆ ಎಂದು ಹೇಳಲಾಗುತ್ತಿದೆ..
ಹೌದು, ಪಾಕಿಸ್ತಾನದಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಮಗತ್ತು ನೈಸರ್ಗಿಕ ಅನಿಲ ಇರುವುದು ಗೊತ್ತಾಗಿದೆ.. ಈ ಬಗ್ಗೆ ಪಾಕಿಸ್ತಾನದ ಹಲವು ಮಾಧ್ಯಮಗಳು ವರದಿ ಮಾಡಿದ್ದಾರೆ.. ಕರಾಚಿ ಬಳಿ ಸಮುದ್ರದಲ್ಲಿ ಅಪಾರ ಪ್ರಮಾಣದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇರುವುದನ್ನು ಪತ್ತೆ ಮಾಡಲಾಗಿದೆ ಎನ್ನಲಾಗಿದೆ.. ಇದರಿಂದಾಗಿ ಪಾಕಿಸ್ತಾನ ಶೀಘ್ರದಲ್ಲಿಯೇ ತನ್ನ ಆರ್ಥಿಕ ಸಮಸ್ಯೆಯಿಂದ ಹೊರಬರುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..
ಪಾಕಿಸ್ತಾನದ ತನ್ನ ದೇಶದಲ್ಲಿನ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಂಪತ್ತಿನ ಬಗ್ಗೆ ಸರ್ವೇಗಳನ್ನು ನಡೆಸುತ್ತಿತ್ತು.. ಮೂರು ವರ್ಷಗಳಿಂದ ನಡೆದ ಈ ಸರ್ವೇಗೆ ಈ ಫಲ ಸಿಕ್ಕಂತೆ ಕಾಣುತ್ತಿದೆ..

Share Post