ನಿರುದ್ಯೋಗಿಗಳಿಗೆ ಬಜೆಟ್‌ನಲ್ಲಿ ಕೊಡುಗೆ; ಉದ್ಯೋಗಿಗಳಿಗೆ ಗೌರವ ಧನ ಹೆಚ್ಚಳ
2023-24ನೇ ಬಜೆಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ ಕೊಟ್ಟಿದೆ. ಪದವಿ ಮುಗಿಸಿ ಮೂರು ವರ್ಷವಾದರೂ ಉದ್ಯೋಗ ಸಿಗದವರಿಗೆ 2,000 ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಲಾಗಿದೆ. ಯುವಸ್ನೇಹಿ’ ಎಂಬ ಹೊಸ ಯೋಜನೆಯಡಿ ಒಂದು ಬಾರಿ ಮಾತ್ರ ತಲಾ 2,000 ರೂಪಾಯಿ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.ಜೊತೆಗೆ ಯುವಜನತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ಧನ ನೀಡಲಾಗುತ್ತದೆ.
ಯಾವೆಲ್ಲಾ ಕ್ಷೇತ್ರಗಳ ಉದ್ಯೋಗಿಗಳಿಗೆ ನೆರವು ಸಿಕ್ಕಿದೆ?
೧. ಪದವಿ ಮುಗಿಸಿ 3 ವರ್ಷವಾದರೂ ಕೆಲಸ ಸಿಗದವರಿಗೆ ಒಂದು ಬಾರಿ 2000 ರೂ. ನೆರವು
೨. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ಧನ ನೀಡಲು ತೀರ್ಮಾನ
೩. ಟೂರಿಸ್ಟ್ ಗೈಡ್ಗಳ ಗೌರವ ಧನ ಹೆಚ್ಚಳ. 2000 ರೂ.ನಿಂದ 5000 ರೂ.ಗಳಿಗೆ ಹೆಚ್ಚಿಸಲಾಗಿದೆ
೪. ಗ್ರಾಮ ಸಹಾಯಕರ ಹುದ್ದೆಯನ್ನು ‘ಜನಸೇವಕ’ ಎಂದು ಮರುನಾಮಕರಣ
೫. ಗ್ರಾಮ ಸಹಾಯಕರ ಮಾಸಿಕ ಗೌರವಧನ 13,000 ರೂ. ಗಳಿಂದ. 14,000 ರೂ. ಗೆ ಹೆಚ್ಚಳ
೬. ಆಶಾಕಾರ್ಯಕರ್ತೆಯರು, ಬಿಸಿಯೂಟ ತಯಾರಿಕರು, ಗ್ರಂಥ ಪಾಲಕರ ಗೌರವಧನ 1000 ರೂ. ಹೆಚ್ಚಳ