International

ರೊಮೇನಿಯಾದಿಂದ ದೆಹಲಿಗೆ ತೆರಳಿದ ʻಆಪರೇಷನ್‌ ಗಂಗಾʼ ಕೊನೆಯ ವಿಮಾನ

ರೊಮೇನಿಯಾ: ಉಕ್ರೇನ್‌ ರಷ್ಯಾ ನಡುವಿನ ಯುದ್ಧದಲ್ಲಿ ಭಾರತೀಯರನ್ನು ರಕ್ಷಿಸಲು ಕೈಗೊಂಡ ಆಪರೇಷನ್‌ ಗಂಗಾ ಕಾರ್ಯಾಚರಣೆ ರೊಮೇನಿಯಾದಿಂದ ಹೊರಟ ಕೊನೆಯ ವಿಮಾನ ಇದಾಗಿದೆ.  ಇದುವರೆಗೂ ಉಕ್ರೇನ್‌ನಿಂ ವಿದ್ಯಾರ್ಥಿಗಳನ್ನು ಕರೆತರಲು ಏರ್‌ ಇಂಡಿಯಾ ವಿಮಾನಗಳನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಇದೀಗ ರೊಮೇನಿಯಾದಿಂದ 155 ಜನರೊಂದಿಗೆ ಕೊನೆಯ ವಿಮಾನ ದೆಹಲಿಗೆ ಹೊರಟಿದೆ. ಇದರಲ್ಲಿ ಭಾರತೀಯ ನಾಗರಿಕರು ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಸೇರಿದ್ದಾರೆ. ಒಟ್ಟು ಇದುವರೆಗೂ 7,457 ಜನರನ್ನು ರೊಮೇನಿಯಾದಿಂದ ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ರೊಮೇನಿಯಾದಲ್ಲಿ ಒಂದು ವಾರ ಉಳಿದುಕೊಂಡು ವೈಯಕ್ತಿಕವಾಗಿ ಮೇಲ್ವಿಚಾರಣೆಯನ್ನು ನಡೆಸಿದ್ರು.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಭಾರತ ಸರ್ಕಾರದ ‘ಆಪರೇಷನ್ ಗಂಗಾ’ ಕಾರ್ಯಕ್ರಮವು ಭರದಿಂದ ಸಾಗುತ್ತಿದೆ. ಇದರ ಭಾಗವಾಗಿ ಇದುವರೆಗೆ ಸುಮಾರು 16,000 ಜನರನ್ನು ವಿಶೇಷ ವಿಮಾನಗಳಲ್ಲಿ ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಿದೆ. ಭಾನುವಾರ 11 ವಿಮಾನಗಳಲ್ಲಿ ಒಟ್ಟು 2135 ಜನರು ಭಾರತಕ್ಕೆ ಆಗಮಿಸಿದ್ದಾರೆ. ಇನ್ನೂ 8 ವಿಮಾನಗಳು ಆಗಮಿಸಲಿವೆ.. ಅವುಗಳಲ್ಲಿ 1500ಕ್ಕೂ ಹೆಚ್ಚು ವಿಮಾನಗಳನ್ನು ಭಾರತೀಯರು ವಾಪಸ್ ಬರಲಿದ್ದಾರೆ ಎಂದು ನಾಗರಿಕ ವಿಮಾನಯಾನ ಇಲಾಖೆ ತಿಳಿಸಿದೆ.

 

Share Post