International

ರಷ್ಯಾ ಯುದ್ಧ ಟ್ಯಾಂಕರ್‌ಗಳ ಮೇಲೆ ರಾರಾಜಿಸಿದ ಉಕ್ರೇನ್‌ ಧ್ವಜ..!ವಿಡಿಯೋ ವೈರಲ್

ಉಕ್ರೇನ್‌: ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧ ಮುಂದುವರೆದಿದೆ. ಫೆಬ್ರವರಿ 24 ರಂದು ಪ್ರಾರಂಭವಾದ ಯುದ್ಧವು ಇಂದಿಗೂ ನಡೆಯುತ್ತದೆ. ಈ ಯುದ್ಧದಲ್ಲಿ ಇದುವರೆಗೆ ನೂರಾರು ನಾಗರಿಕರು ಮತ್ತು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೆಡೆ ದೇಶ ಬಿಟ್ಟು ಹೋಗುತ್ತಿರುವ ಪ್ರಜೆಗಲಾದರೆ ಇನ್ನೊಂದೆಡೆ ತಮ್ಮ ತಾಯ್ನಾಡನ್ನು ಉಳಿಸಿಕೊಳ್ಳಲು ನಾಗರೀಕರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಉಕ್ರೇನಿಯನ್ ನಾಗರಿಕರು ರಷ್ಯಾದ ಪಡೆಗಳ ದಾಳಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ರಷ್ಯಾ ಟ್ಯಾಂಕ್‌ಗಳನ್ನು ತಮ್ಮ ದೇಶಕ್ಕೆ ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರು ಮತ್ತು ಮಹಿಳೆಯರವರೆಗೆ ಎಲ್ಲರೂ ರಷ್ಯಾದೊಂದಿಗೆ ಯುದ್ಧಕ್ಕೆ ಸಿದ್ಧರಾಗಲು ಮುಂದೆ ಬರುತ್ತಿದ್ದಾರೆ.

ರಷ್ಯಾದ ಪಡೆಗಳು ಟ್ಯಾಂಕ್‌ಗಳೊಂದಿಗೆ ಉಕ್ರೇನ್ ನಗರಗಳನ್ನು ಪ್ರವೇಶಿಸಿದರೂ, ದೇಶದ ನಾಗರಿಕರು ಭಯವಿಲ್ಲದೆ ನಿಂತರು. ಈ ಹಿನ್ನೆಲೆಯಲ್ಲಿ ಉಕ್ರೇನಿಯನ್ ಪ್ರಜೆಯೊಬ್ಬ ತನ್ನ ರಾಷ್ಟ್ರಧ್ವಜದೊಂದಿಗೆ ರಷ್ಯಾ ಯುದ್ಧ ಟ್ಯಾಂಕರ್‌ ಮುಂದೆ ನಿಂತಿದ್ದಾನೆ. ಅಷ್ಟೇ ಅಲ್ಲದೆ ಯುದ್ಧ ಟ್ಯಾಂಕ್ ಅನ್ನು ಹತ್ತಿ ಧ್ವಜವನ್ನು ಹಾರಿಸಿದ್ದಾನೆ. ಯುವಕನ ಸಾಹಸಕ್ಕೆ ಅಲ್ಲಿದ್ದ  ಇತರ ಉಕ್ರೇನಿಯನ್ನರು ಹರ್ಷೋದ್ಗಾರ ಮಾಡಿದರು. ಉಕ್ರೇನ್ ಜನರು ರಷ್ಯಾ ಪಡೆಗಳ  ಆಕ್ರಮಣವನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ ಎಂಬುದನ್ನು ಸಾಬೀತು ಮಾಡಿದ್ದಾರೆ.

ಉಕ್ರೇನ್ ಪ್ರಜೆಯೊಬ್ಬ ತನ್ನ ರಾಷ್ಟ್ರಧ್ವಜದೊಂದಿಗೆ ರಷ್ಯಾದ ಯುದ್ಧ ಟ್ಯಾಂಕ್ ಮೇಲೇರಿ ಅಲ್ಲಿ ತನ್ನ ರಾಷ್ಟ್ರಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share Post