EconomyInternational

ಭಾರತೀಯ ಟೆಕ್ಕಿಗೆ ಉದ್ಯೋಗ ಹೋಯ್ತು; ಈಗ ಆತ ಕೆನಡಾದಲ್ಲಿ ಊಬರ್‌ ಡ್ರೈವರ್‌!

ಕೆನಡಾ; ಜಗತ್ತಿನ ಹಲವು ದೇಶಗಳು ಆರ್ಥಿಕ ಹಿಂಝರಿತ ಅನುಭವಿಸುತ್ತಿವೆ. ಇದು ಅನೇಕರ ಬದುಕುಗಳ ಮೇಲೆ ಪರಿಣಾಮ ಬೀರಿದೆ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಅದೇ ರೀತಿಯಾಗಿ ಕೆನಡಾದಲ್ಲಿ ಉದ್ಯೋಗ ಕಳೆದುಕೊಂಡಿರುವ ಭಾರತೀಯ ಮೂಲದ ಟೆಕ್ಕಿ ಒಬ್ಬ, ಬದುಕುವುದಕ್ಕಾಗಿ ಊಬರ್‌ ಕ್ಯಾಬ್‌ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಆತ ತನ್ನ ಸ್ವಂತದ ಟೆಸ್ಲಾ ಕಾರನ್ನು ಬಳಸುತ್ತಿದ್ದಾನೆ. ಆತನೇ ಅದರ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿದ್ದು, ಸಖತ್‌ ವೈರಲ್‌ ಆಗುತ್ತಿವೆ.

ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿರುವ ಭಾರತೀಯ ಮೂಲದ ಟೆಕ್ಕಿ, ಕೆಲಸ ಕಳೆದುಕೊಂಡು ಈಗ ಐಷಾರಾಮಿ ಟೆಸ್ಲಾ  ಕಾರಿನಲ್ಲಿ ಉಬರ್ ಟ್ಯಾಕ್ಸಿ ಓಡಿಸುತ್ತಿದ್ದಾನೆ. ಜೊತೆಗೆ ಈ ಕಾರಿನಲ್ಲಿ ಪಾರ್ಸೆಲ್‌ ಬಾಕ್ಸ್‌ಗಳನ್ನು ತುಂಬಿಕೊಂಡು ಅವುಗಳನ್ನು ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದಾನೆ.

ತನ್ನ ಸ್ನೇಹಿತರೊಬ್ಬರಿಂದ ನಡೆಸಲ್ಪಡುವ ದಿನಸಿ ವಿತರಣಾ ಅಂಗಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾರೆ. ಟೆಸ್ಲಾ ಕಾರಿನಲ್ಲಿ ಅಗತ್ಯ ವಸ್ತುಗಳನ್ನು ತುಂಬಿಕೊಂಡು ಗ್ರಾಹಕರಿಗೆ ತಲುಪಿಸುತ್ತಿದ್ದಾನೆ. ದಿನಕ್ಕೆ ಎಂಟು ಗಂಟೆಗಳ ಈ ಕೆಲಸ ಮಾಡುತ್ತಾನೆ ಎಂದು ತಿಳಿದುಬಂದಿದೆ.

 

Share Post