ತಾಲಿಬಾನ್‌ಗೆ ವಿಶ್ವಬ್ಯಾಂಕ್ ಶಾಕ್: 600 ಮಿಲಿಯನ್ ಡಾಲರ್ ಅಭಿವೃದ್ಧಿ ಯೋಜನೆಗಳು ಸ್ಥಗಿತ
ಆಫ್ಘಾನಿಸ್ತಾನ: ಹೆಣ್ಣುಮಕ್ಕಳ ಶಿಕ್ಷಣದ ವಿಚಾರದಲ್ಲಿ ತಾಲಿಬಾನಿಗಳು ತಮ್ಮ ನಿಜ ಸ್ವರೂಪವನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಹೇಳಿ ಉಲ್ಟಾ ಹೊಡೆದಿದ್ದಾರೆ. ಇದೀಗ ಹೈಸ್ಕೂಲ್ ಶಿಕ್ಷಣಕ್ಕೆ ಅನುಮತಿ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ತಾಲಿಬಾನ್ ತೆಗೆದುಕೊಂಡಿರುವ ಈ ನಿರ್ದಾರಗಳಿಂದಾಗಿ ತಮಗೆ ಕಣ್ಣನ್ನು ತಾವೇ ತಿವಿದುಕೊಂಡಂತಾಗಿದೆ. ತಾಲಿಬಾನ್ ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿರುವ ಕುರಿತು ವಿಶ್ವಬ್ಯಾಂಕ್ ತಾಲಿಬಾನ್‌ಗೆ ಶಾಕ್ ನೀಡಿದೆ.
ತಾಲಿಬಾನ್ ಸರ್ಕಾರ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿರುವುದನ್ನು ವಿಶ್ವಬ್ಯಾಂಕ್ ತೀವ್ರವಾಗಿ ಖಂಡಿಸಿದೆ. ಅಫ್ಘಾನಿಸ್ತಾನ ಪುನರ್ನಿರ್ಮಾಣ ಟ್ರಸ್ಟ್ ಫಂಡ್ (ARTF) ಅಡಿಯಲ್ಲಿ ಆಫ್ಘನ್ ನೆಲದಲ್ಲಿ $ 600 ಮಿಲಿಯನ್ ಡಾಲರ್ ಮೌಲ್ಯದ ಯೋಜನೆಗಳನ್ನು ವಿಶ್ವ ಬ್ಯಾಂಕ್ ಸ್ಥಗಿತಗೊಳಿಸಿದೆ. ಅಫ್ಘಾನಿಸ್ತಾನದಿಂದ ಅಮೇರಿಕಾ ಸೇನೆ ವಾಪಸಾದ ನಂತರ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ.
ಇದು ವಿಶ್ವಬ್ಯಾಂಕ್ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ಆಫ್ಘನ್ ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಫ್ರೀಜ್ ಮಾಡಿದ್ದಾರೆ. ಆದರೆ ವಿಶ್ವಸಂಸ್ಥೆಯು ಕೃಷಿ, ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಕ್ಷೇತ್ರಗಳಿಗೆ ಬೆಂಬಲ ನೀಡುವ ಸಲುವಾಗಿ ARTF ಸಹಕಾರ ನೀಡಿವೆ.
ಇದೀಗ ARTF ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಸಮಾನವಾಗಿ ಹಕ್ಕು ಪಡೆಯಬೇಕೆಂದು ವಿಶ್ವ ಬ್ಯಾಂಕ್ ಷರತ್ತು ವಿಧಿಸಿದೆ. ಇಂತಹ ಹೊತ್ತಿನಲ್ಲಿ ತಾಲಿಬಾನ್ ಸರ್ಕಾರ 7ನೇ ತರಗತಿ ಬಳಿಕ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ನಿಷೇಧಿಸಿರುವುದಕ್ಕೆ ವಿಶ್ವಬ್ಯಾಂಕ್ ಆಕ್ರೋಶ ವ್ಯಕ್ತಪಡಿಸಿದೆ. ನಿಯಮಾವಳಿಗಳನ್ನು ಅನುಸರಿಸದ ಕಾರಣ ವಿಶ್ವಬ್ಯಾಂಕ್ ARTF ನಿಧಿಯನ್ನು ನಿಲ್ಲಿಸಿದೆ.
ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಪಾಲುದಾರರು ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ನಂತರವೇ ಯೋಜನೆಗಳನ್ನು ಎಆರ್‌ಟಿಎಫ್‌ಗೆ ಹಸ್ತಾಂತರಿಸಲಾಗುವುದು ಎಂದು ವಿಶ್ವಬ್ಯಾಂಕ್ ಅಧಿಕಾರಿಗಳು ಅಫ್ಘಾನಿಸ್ತಾನ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ. ತಾಲಿಬಾನ್ ಬಾಲಕಿಯರ ಶಿಕ್ಷಣವನ್ನು ನಿಷೇಧಿಸಿದ ನಂತರ ದೋಹಾದಲ್ಲಿ ತಾಲಿಬಾನ್ ನಾಯಕರೊಂದಿಗಿನ ಸಭೆಯನ್ನು ಯುಎಸ್ ಅಧಿಕಾರಿಗಳು ರದ್ದು ಮಾಡಿದ್ದಾರೆ, ಆದರೆ ತಾಲಿಬಾನ್ ನಾಯಕರು ಏಪ್ರಿಲ್ ನಿಂದ ಹೆಣ್ಣುಮಕ್ಕಳನ್ನು ಶಾಲೆಗಳಿಗೆ ಕಳಿಸಲು ಅನುಮತಿಸುವುದಾಗಿ ಹೇಳಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.