HealthNational

ಟಾರ್ಚ್‌ ಲೈಟ್‌ ಹಿಡಿದು ಹೆರಿಗೆ ಮಾಡಿದರು; ತಾಯಿ, ಮಗು ಇಬ್ಬರೂ ದುರ್ಮರಣ!

ಮುಂಬೈ; ಸರ್ಕಾರಿ ಆಸ್ಪತ್ರೆಗಳಲ್ಲಿ ಯಾಕಿಷ್ಟು ನಿರ್ಲಕ್ಷ್ಯವೋ ಗೊತ್ತಿಲ್ಲ.. ಬಹುತೇಕ ಕಡೆ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಾರೆ ಎಂಬ ಆರೋಪವಿದೆ.. ಹಲವಾರು ಸರ್ಕಾರಿ ಆಸ್ಪತ್ರೆಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದರೂ, ಕೆಲವೊಂದು ಆಸ್ಪತ್ರೆಗಳಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಬಗ್ಗೆಯೂ ಜನರ ತಾತ್ಸಾರ ಮನೋಭಾವ ಹೊಂದುವಂತಾಗಿದೆ.. ಇದಕ್ಕೊಂದು ಉದಾಹರಣೆ ಇಲ್ಲಿದೆ..

ಮುಂಬೈನ ಭಾಂಡೂಪ್‌ ಮುನ್ಸಿಪಲ್‌ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತಾಯಿ-ಮಗು ಇಬ್ಬರೂ ಸಾವನ್ನಪ್ಪಿದ್ದಾರೆ.. ಈ ಆಸ್ಪತ್ರೆಗೆ ಸುಷ್ಮಾ ಸ್ವರಾಜ್‌ ಆಸ್ಪತ್ರೆ ಎಂದು ಹೆಸರಿಡಸಲಾಗಿದೆ.. ಇಲ್ಲಿ ಸೂಕ್ತ ಸೌಲಭ್ಯಗಳಿಲ್ಲದಿಂದ ತಾಯಿ ಮಗು ಸಾವನ್ನಪ್ಪಿದ್ದಾರೆ.. ಮಹಿಳೆ ಹೆರಿಗೆ ಬಂದಿದ್ದಳು.. ಹೆರಿಗೆಯಾಗುವ ಸಮಯದಲ್ಲೇ ಆಸ್ಪತ್ರೆಯಲ್ಲಿ ಕರೆಂಟ್‌ ಹೋಗಿದೆ.. ಇದರಿಂದಾಗಿ ಟಾರ್ಚ್‌ ಹಿಡಿದು ಹೆರಿಗೆ ಮಾಡಲಾಗಿದೆ.. ಇದರಿಂದಾಗಿ ತಾಯಿ-ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ..

ಸಹೀದುನ್​ ಅನ್ಸಾರಿ (26) ಎಂಬ ಮಹಿಳೆ ಹಾಗೂ ಆಕೆಯ ನವಜಾತ ಶಿಶು ಸಾವನ್ನಪ್ಪಿದ್ದಾರೆ.. ಇವರು ಭಾಂಡೂಪ್​ ನಿವಾಸಿಯಾಗಿದ್ದು, ಹನುಮಾನ್​ ನಗರದಲ್ಲಿರುವ ಸುಷ್ಮಾ ಸ್ವರಾಜ್​ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಏಪ್ರಿಲ್​ 30ರಂದು ರಾತ್ರಿ 12.30ಕ್ಕೆ ಹೆರಿಗೆಯಾಗಿದ್ದು, ಕೆಲ ಹೊತ್ತಿನಲ್ಲೇ ಮಗು ಸಾವನ್ನಪ್ಪಿದೆ. ಬಳಿಕ ತಾಯಿಯ ಆರೋಗ್ಯದಲ್ಲೂ ಏರುಪೇರಾಗಿತ್ತು.. ಕೂಡಲೇ ಆಕೆಯನ್ನು ಎಲ್​ಟಿಎಂಜಿ ಸಿಯಾನ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದ್ರೆ ಆಕೆ ಅಲ್ಲಿ ಸಾವನ್ನಪ್ಪಿದ್ದಾಳೆ..

ಕತ್ತಲಲ್ಲಿ ಸಿಸೇರಿಯನ್‌ ಮಾಡಲಾಗಿದ್ದು, ತೀವ್ರ ರಕ್ತಸ್ರಾವ ಆಗಿದ್ದರೂ ವೈದ್ಯರು ಸರಿಯಾಗಿ ನೋಡಿಕೊಂಡಿಲ್ಲ.. ಹೀಗಾಗಿ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ..

Share Post