ಭಾರತೀಯ ರಾಯಭಾರ ಕಚೇರಿಯಿಂದ ಹೊಸ ಸೂಚನೆ: ನಡೆದುಕೊಂಡಾದ್ರೂ ಸರಿ ಖಾರ್ಕಿವ್ ಬಿಟ್ಟು ಬನ್ನಿ
ಕೀವ್: ರಷ್ಯಾ ಉಕ್ರೇನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. 64ಕಿ.ಮೀ.ಯುದ್ಧ ಟ್ಯಾಂಕರ್‌ಗಳೊಂದಿಗೆ ಕೀವ್ ನಗರ ಪ್ರವೇಶಿಸಲು ಹತ್ತಿರವಾಗುತ್ತಿವೆ. ಈ ಬೆಳವಣಿಗೆಗಳ ನಡುವೆ ಕೂಡಲೇ ಖಾರ್ಕಿವ್ ನಗರ ಬಿಟ್ಟು ಕೂಡಲೇ ಹೊರಡಿ ಎಂದು ಭಾರತೀಯ ರಾಯಭಾರ ಕಚೇರಿ ಮತ್ತೊಂದು ಆದೇಶವನ್ನು ಜಾರಿ ಮಾಡಿದೆ. ವಾಹನಗಳು ಇಲ್ಲದಿದ್ರೂ, ಯಾವುದಕ್ಕೂ ಕಾಯದೆ ಕಾಲು ನಡಿಗೆಯ ಮೂಲಕ ಉಕ್ರೇನ್ ಬಿಟ್ಟು ಬನ್ನಿ ಎಂದು ಕೀವ್ ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಆದೇಶಿಸಿದೆ.
ಜೊತೆಗೆ ಖಾರ್ಕಿವ್‌ನಿಂದ ಮೂರು ಪ್ರದೇಶಗಳು ಪೆಸೊಚಿನ್, ಬಬೈ ಮತ್ತು ಬೆಜ್ಲ್ಯುಡೋವ್ಸ್ಕಾಲಾ ನಡುವಿನ ಅಂತರವನ್ನು ತಿಳಿಸಿದರು. ಪೆಸೊಚಿನ್ ಖಾರ್ಕಿವ್‌ನಿಂದ 11 ಕಿಲೋಮೀಟರ್, ಬಬೈ 12 ಕಿಲೋಮೀಟರ್ ಮತ್ತು ಬೆಜ್ಲ್ಯುಡೋವ್ಸ್ಕಯಾದಿಂದ 16 ಕಿಲೋಮೀಟರ್ ದೂರದಲ್ಲಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಹೇಗಾದರೂ ಸರಿ, ನೀವು ಯಾವುದೇ ಪರಿಸ್ಥಿತಿಯಲ್ಲಿ ಇದ್ರೂ ಸರಿ ಭಾರತೀಯ ವಿದ್ಯಾರ್ಥಿಗಳು ತಕ್ಷಣವೇ ಖಾರ್ಕಿವ್ ತೊರೆಯುವಂತೆ ಎಚ್ಚರಿಸಿದೆ.
ಉಕ್ರೇನ್ ಪ್ರಮುಖ ನಗರಗಳಲ್ಲಿ ಪರಿಸ್ಥಿತಿ ಮಿತಿಮೀರಿದೆ. ಅದರಲ್ಲೂ ಮುಖ್ಯವಾಗಿ ಕೀವ್ ಮತ್ತು ಖಾರ್ಕಿವ್ ಅತ್ಯಂತ ಪ್ರಮಾದದ ಅಂಚಿನಲ್ಲಿದೆ. ಕೂಡಲೇ ತಾವು ತಿಳಿಸಿರುವ ಪ್ರದೇಶಗಳಿಗೆ ವಿದ್ಯಾರ್ಥಿಗಳು ಕೂಡಲೇ ಬನ್ನಿ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.