International

ಚೀನಾದ ಬೋಯಿಂಗ್‌ ವಿಮಾನ ಪತನ; 133 ಮಂದಿ ಸಾವನ್ನಪ್ಪಿರುವ ಶಂಕೆ..!

ಬೀಚಿಂಗ್‌: ಚೀನಾದಲ್ಲಿ ಬೋಯಿಂಗ್‌ ವಿಮಾನ ಪತನವಾಗಿದ್ದು, ದುರಂತದಲ್ಲಿ 133 ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಗುವಾಂಗ್​ಕ್ಸಿ ಪ್ರದೇಶದ ವುಝೌ ನಗರದ ಸಮೀಪ ಬೋಯಿಂಗ್ 737 ವಿಮಾನ ಪತನಗೊಂಡಿದ್ದು, ಕೆಳಗೆ ಬಿದ್ದ ಕೂಡಲೇ ಅದು ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ. ವಿಮಾನದಲ್ಲಿ 133 ಮಂದಿ ಪ್ರಯಾಣಿಸುತ್ತಿದ್ದರು. ಎಲ್ಲರೂ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
     ಬೋಯಿಂಗ್‌ ವಿಮಾನ ಕುನ್‌ಮಿಂಗ್‌ನಿಂದ ಗೌಂಗುಗೆ ತೆರಳುತ್ತಿತ್ತು. ಈ ವೇಳೆ ವಿಮಾನ ದುರಂತಕ್ಕೀಡಾಗಿದೆ.  ವಿಮಾನ ಕೆಳಗೆ ಬೀಳುತ್ತಿದ್ದಂತೆ, ದಟ್ಟ ಹೊಗೆ ಆವರಿಸಿದೆ. ವಿಮಾನದಲ್ಲಿದ್ದವರು ಬದುಕುಳಿದಿರುವುದು ಅನುಮಾನ ಎಂದು ಹೇಳಲಾಗುತ್ತಿದೆ.
https://youtu.be/fndUohzdbr8
Share Post