ನಿನ್ನೆ ನವೀನ್ ಇಂದು ಚಂದನ್: ಉಕ್ರೇನ್ ಯುದ್ಧ ಭೂಮಿಯಲ್ಲಿ ಪ್ರಾಣಬಿಟ್ಟ ವಿದ್ಯಾರ್ಥಿಗಳು
ಉಕ್ರೇನ್: ರಷ್ಯಾ ಉಕ್ರೇನ್ ಮೇಲಿನ ದಾಳಿಯಲ್ಲಿ ಸೈನಿಕರಷ್ಟೇ ಅಲ್ಲದೆ ನಾಗರೀಕರು ಕೂಡ ಸೇರಿದ್ದಾರೆ. ಅದರಲ್ಲಿ ವಿದ್ಯಾಭ್ಯಾಸಕ್ಕಾಗಿ ತನ್ನ ತಾಯ್ನಾಡನ್ನು ಬಿಟ್ಟು ಉಕ್ರೇನ್‌ಗೆ ಹೋಗಿದ್ದ ವಿದ್ಯಾರ್ಥಿಗಳು ಕೂಡ ಯುದ್ಧಭೂಮಿಯಲ್ಲಿ ಅಸುನೀಗುತ್ತುದ್ದಾರೆ. ನಿನ್ನೆ ರಷ್ಯಾ ಹಾಕಿದ ಶೆಲ್ ದಾಳಿಗೆ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ರು. ಅದರ ನೋವು ಹಸಿಯಾಗಿರುವಾಗಲೇ ಮತ್ತೊಂದು ಸಾವಿನ ಸುದ್ದಿ ಭಾರತದ ಬಾಗಿಲು ತಟ್ಟಿದೆ. ಇಂದು ಪಂಜಾಬ್ ಮೂಲದ ವಿದ್ಯಾರ್ಥಿ ಚಂದನ್ ಸಾವನ್ನಪ್ಪಿರುವುದಾಗಿ ಭಾರತೀಯ ಸಚಿವಾಲಯ ತಿಳಿಸಿದೆ.
ಆದರೆ ಈತನ ಸಾವು ದಾಳಿಯಿಂದ ಆದುದಲ್ಲ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ. ಪಂಜಾಬ್ ಮೂಲದ 22 ವರ್ಷದ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿಗೆ ಇಸ್ಕಿಮಿಯಾ ಸ್ಟ್ರೋಕ್(ಮೆದುಳಿಗೆ ರಕ್ತ ಸಂಚಾರ ಆಗದೇ ಸಾವನ್ನಪ್ಪುವುದು) ಎಂಬ ಖಾಯಿಲೆ ಇದ್ದು ಇದರಿಂದ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಚಂದನ್ ಜಿಂದಾಲ್ ವಿನ್ನಿಟ್ಸಿಯಾದ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಮೆಡಿಸಿನ್ ಓದುತ್ತಿದ್ದ. ಕಳೆದ ತಿಂಗಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದ ಚಂದನ್ ಜಿಂದಾಲ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಚಂದನ್ ಜಿಂದಾಲ್ ಸಾವಿನ ಸಮಯದಲ್ಲಿ ಅವರ ತಂದೆ ಕೂಡ ಅವರ ಜೊತೆಯಲ್ಲಿದ್ರು ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಮಗನ ಶವವನ್ನು ಭಾರತಕ್ಕೆ ಸ್ಥಳಾಂತರಿಸಲು ಅಲ್ಲಿನ ಅಧಿಕಾರಿಗಳ ನೆರವನ್ನು ಕೋರಿದ್ದಾರೆ.
ಉಕ್ರೇನ್-ರೊಮೇನಿಯಾ ಗಡಿಯಲ್ಲಿರುವ ಸಿರೆಟ್‌ಗೆ ತಲುಪಿದರೆ ಅಲ್ಲಿಂದ ಶ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರವನ್ನು ಸಾಗಿಸಬಹುದು. ಆದರೆ ಆಸ್ಪತ್ರೆಯಿಂದ ಏರ್ ಆಂಬ್ಯುಲೆನ್ಸ್ ಮೂಲಕವೇ ಶವವನ್ನು ಸೀರೆಟ್ ಗೆ ಸ್ಥಳಾಂತರಿಸಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಚಂದನ್ ತಂದೆ ಮನವಿ ಮಾಡಿದ್ದಾರೆ.