International

ಮಯನ್ಮಾರ್‌ನಲ್ಲಿ ಭಾರಿ ಭೂಕುಸಿತ: 70 ಕಾರ್ಮಿಕರು ನಾಪತ್ತೆ..!

ಮಯನ್ಮಾರ್‌: ಇಲ್ಲಿನ ಯಾಂಗೋನ್‌ ಪ್ರದೇಶದ ಗಣಿಯೊಂದರಲ್ಲಿ ಭಾರಿ ಭೂ ಕುಸಿತ ಉಂಟಾಗಿದೆ. ಕಾರ್ಮಿಕರು ಕಲ್ಲಿನ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಭಾರಿ ಭೂ ಕುಸಿತ ಉಂಟಾಗಿದ್ದು, 70 ಕಾರ್ಮಿಕರು ಕಾಣೆಯಾಗಿದ್ದಾರೆ.  ಕಾರ್ಮಿಕರು ಮಣ್ಣಿನಡಿ ಸಿಲುಕಿರಬಹುದೆಂದು ಶಂಕಿಸಲಾಗಿದೆ.

   ಉತ್ತರ ಮ್ಯಾನ್ಮಾರ್​ನ ಕಚಿನ್ ರಾಜ್ಯದ ಯಾಂಗೋನ್‌ ಪ್ರದೇಶದಲ್ಲಿ ಈ ಗಣಿ ಇದೆ. 2020ರ ಜುಲೈ ತಿಂಗಳಲ್ಲೂ ಇದೇ ಗಣಿಯಲ್ಲಿ ಭೂಕುಸಿತ ಉಂಟಾಗಿತ್ತು. ಆ ವೇಳೆ ನೂರಕ್ಕೂ ಹೆಚ್ಚು ಕಾರ್ಮಿಕರು ಸಾವನ್ನಪ್ಪಿದ್ದರು. ಇಲ್ಲಿ ಪಚ್ಚೆಕಲ್ಲುಗಳು ಸಿಗುತ್ತವೆ. ಇವುಗಳನ್ನು ತೆಗೆದು ಆಭರಣಗಳಿಗೆ ಬಳಸಲಾಗುತ್ತದೆ. ಹೀಗಾಗಿ ನೂರಾರು ಕಾರ್ಮಿಕರು ಈ ಗಣಿಯಲ್ಲಿ ಕೆಲಸ ಮಾಡುತ್ತಾರೆ.

    ಹೀಗೆ ಗಣಿ ಕೆಲಸ ಮಾಡುವಾಗ ಯಾವುದೇ ಮುಂಜಾಗ್ರತೆ ವಹಿಸದೇ ಇರಿವ ಕಾರಣದಿಂದಾಗಿ ಮತ್ತೆ ಭೂಕುಸಿತ ಉಂಟಾಗಿದೆ. 70 ಕಾರ್ಮಿಕರು ನಾಪತ್ತೆಯಾಗಿದ್ದು, ಇದರಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಬಹುತೇಕ ಕಾರ್ಮಿಕರು ಸಾವನ್ನಪ್ಪಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.

Share Post