Sports

ಇಂದಿನಿಂದ ಪ್ರೊ ಕಬ್ಬಡ್ಡಿ ಲೀಗ್‌ ಆರಂಭ

ಬೆಂಗಳೂರು: ಎಂಟನೇ ಆವೃತ್ತಿಯ ಪ್ರೊ ಕಬ್ಬಡ್ಡಿ ಲೀಗ್‌ ಇಂದಿನಿಂದ ಆರಂಭವಾಗುತ್ತದೆ. ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು ಯು ಮುಂಬಾ ತಂಡಕ್ಕೆ ಸವಾಲೊಡ್ಡಲಿದೆ.
ಕೋವಿಡ್‌ ಕಾರಣದಿಂದಾಗಿ ಬಯೋಬಲ್‌ನಲ್ಲಿ ಟೂರ್ನಿಯು ವೈಟ್‌ ಫೀಲ್ಡ್‌ ನಲ್ಲಿರುವ ಶೆರಟಾನ್‌ ಗ್ರ್ಯಾಂಡ್‌ ಹೊಟೇಲ್‌ ನಲ್ಲಿ ನಿಗದಿಯಾಗಿದೆ. ೧೨ ತಂಡಗಳು ಟೂರ್ನಿಗೆ ಪ್ರೇಕ್ಷಕರಿಗೆ ಅವಕಾಶ ನೀಡಿಲ್ಲ. ಮಶಾಲ್‌ ಸ್ಫೋರ್ಟ್ಸ್‌ ಆಯೋಜಿಸಿರುವ ಟೂರ್ನಿಯಲ್ಲಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.
ಟೂರ್ನಿಯ ಮೊದಲು ನಾಲ್ಕು ದಿನಗಳು ಟ್ರಿಪಲ್‌ ಹೆಡರ್‌ ನಡೆಯಲಿದೆ. ನಂತರ ಪ್ರತಿ ಶನಿವಾರ ಮೂರು ಪಂದ್ಯಗಳು ಆಯೋಜನೆಯಾಗಲಿವೆ. ಸೆಮಿಫೈನಲ್‌ ಮತ್ತು ಫೈನಲ್‌ ಸೇರಿ ಒಟ್ಟು ೧೩೭ ಪಂದ್ಯಗಳು ನಡೆಯಲಿದ್ದು, ಸದ್ಯ ೬೬ ಪಂದ್ಯಗಳು ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಪಂದ್ಯಗಳು ಜನವರಿ ೨೦ ವರೆಗೆ ನಡೆಯಲಿವೆ.
ಬೆಂಗಳೂರು ಬುಲ್ಸ್‌ ಗೆ ಈ ಬಾರಿ ಸ್ಟಾರ್‌ ರೈಡರ್‌ ಪವನ್‌ ಕುಮಾರ್‌ ಶೆರಾವತ್‌ ನಾಯಕನಾಗಿದ್ದು, ಹೊಸ ಹುರುಪಿನೊಂದಿಗೆ ಟೂರ್ನಿ ಗೆ ರೆಡಿಯಾಗಿದೆ.

Share Post