ಅಣುಸ್ಥಾವರದ ಮೇಲೆ ರಷ್ಯಾ ದಾಳಿ; ಆರು ನಗರ ವಶಕ್ಕೆ ಸಜ್ಜು
ಕೀವ್; ಝಪೋರಿಝಿಯಾ ಅಣುಸ್ಥಾವರದ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದೆ. ಚೆರ್ನೋಬಿಲ್ ಬಳಿಕ ಮತ್ತೊಂದು ಭೀಕರ ದುರಂತ ಇದು ಎಂದು ಹೇಳಲಾಗುತ್ತಿದೆ. ಶೆಲ್ ದಾಳಿಯಿಂದ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಬಳಿ ಭಾರಿ ಸ್ಫೋಟ ಸಂಭವಿಸಿದೆ. ಆದ್ರೆ ಯಾವುದೇ ಪ್ರಾಣಾಪಾಯ ಸಂಭವಿಸಿದ್ದರ ಬಗ್ಗೆ ವರದಿಯಾಗಿಲ್ಲ
ಇನ್ನು ರಷ್ಯಾ ಉಕ್ರೇನ್‌ನ ಆರು ನಗರಗಳನ್ನು ವಶಪಡಿಸಿಕೊಳ್ಳಲು ಭಾರಿ ತಯಾರಿ ನಡೆಸಿದೆ. ಖಾರ್ಕಿವ್ ಕೀವ್, ಖೆರ್ಸನ್‌ನಲ್ಲಿ ರಣಾರ್ಭಟ ನಡೆಸುತ್ತಿದೆ. ಈಗಾಗಲೇ ಕೀವ್ ನಗರ ವಶಪಡಿಸಿಕೊಳ್ಳಲು ರಷ್ಯಾ ಶಸ್ತ್ರಾಸ್ತ್ರಗಳಿರುವ ವಾಹನಗಳು ಕೀವ್ ಸುತ್ತಲೂ ಆವರಿಸಿವೆ. ಸುಮಾರು ೬೪ ಕಿಲೋಮೀಟರ್‌ವರೆಗೆ ರಷ್ಯಾ ವಾಹನಗಳು ಸಾಲುಗಟ್ಟಿ ನಿಂತಿವೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ರಷ್ಯಾ ದಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ. ತುರ್ತು ಸಭೆ ನಡೆಸುವಂತೆ ಬ್ರಿಟನ್ ಒತ್ತಾಯ ಮಾಡಿದೆ.