International

ಗಾಜಾಪಟ್ಟಿಯಿಂದ 5 ಸಾವಿರ ರಾಕೆಟ್‌ ದಾಳಿ; ಯುದ್ಧ ಘೋಷಿಸಿದ ಇಸ್ರೇಲ್‌

ಜೆರುಸಲೇಂ: ಪ್ಯಾಲೆಸ್ತೇನ್​ನ ಗಾಜಾ ಪಟ್ಟಿಯ ಕಡೆಯಿಂದ ಇಸ್ರೇಲ್ ಮೇಲೆ 5000 ರಾಕೆಟ್​ಗಳ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮೀನ್ ಯುದ್ಧ ಘೋಷಣೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆದಿದೆ. ದಿಗ್ಭಂಧನಕ್ಕೊಳಗಾಗಿರುವ ಗಾಜಾ ಪಟ್ಟಿಯ ಹಲವಾರು ಕಡೆಗಳಿಂದ ರಾಕೆಟ್‌ ಉಡಾಯಿಸಲಾಗಿದೆ.
ಹಮಾಸ್ ಉಗ್ರಗಾಮಿಗಳು ಇದನ್ನು ಮೊದಲ ದಾಳಿ ಎಂದು ಕರೆದಿದ್ದಾರೆ. ಹೀಗಾಗಿ ಇಸ್ರೇಲ್ ಸರ್ಕಾರ ಯುದ್ಧ ಸ್ಥಿತಿ ಘೋಷಣೆ ಮಾಡಿದೆ. ಇದೀಗ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

‘ಆಪರೇಷನ್ ಅಲ್-ಅಕ್ಸಾ ಫ್ಲಡ್’ ಆರಂಭವಾದಾಗ 5,000 ರಾಕೆಟ್‌ಗಳನ್ನು ಹಾರಿಸಲಾಯಿತು ಎಂದು ಹಮಾಸ್ ಸಶಸ್ತ್ರ ವಿಭಾಗ ಹೇಳಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್ ಯೋಧನನ್ನು ಅಪಹರಿಸಲಾಗಿದೆ. ದಕ್ಷಿಣ ಇಸ್ರೇಲ್‌ನಲ್ಲಿ ಒತ್ತೆಯಾಳಾಗಿಟ್ಟುಕೊಂಡ ಸನ್ನಿವೇಶಗಳು ಕೂಡ ವರದಿಯಾಗಿವೆ.

Share Post