International

ನ್ಯಾಟೋ ದಳದೊಂದಿಗೆ ಅಮೆರಿಕಾ ಅಧ್ಯಕ್ಷನ ಪಿಜಾ ಪಾರ್ಟಿ: ಉಕ್ರೇನ್‌ ನಿರಾಶ್ರಿತರಿಗೆ ಪೋಲೆಂಡ್‌ ಸಹಾಯ ಹಸ್ತ

ಪೋಲೆಂಡ್:‌  ಯುಎಸ್ ಅಧ್ಯಕ್ಷ ಜೋ ಬಿಡನ್ ಪೋಲೆಂಡ್‌ಗೆ ಭೇಟಿ ನೀಡಿದ್ರು. ಉಕ್ರೇನಿಯನ್ ಗಡಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಪೋಲೆಂಡ್‌ನ ರ್ಜೆಸ್ಜೋ ಪ್ರದೇಶದಲ್ಲಿ ನ್ಯಾಟೋ ಪಡೆ ಮತ್ತು ಉಕ್ರೇನಿಯನ್ ನಿರಾಶ್ರಿತರನ್ನು ಭೇಟಿಯಾದರು. ಬಿಡೆನ್ US ಸೈನ್ಯದ 82 ನೇ ವಾಯುಗಾಮಿ ನೌಕಾಪಡೆಯೊಂದಿಗೆ ಸ್ವಲ್ಪ ಸಮಯ ಕಳೆದು ಅವರೊಂದಿಗೆ ಸೆಲ್ಫಿ ಪಿಜ್ಜಾ ಪಾರ್ಟಿ ಮಾಡಿದ್ರು. ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ತರಾಟೆಗೆ ತೆಗೆದುಕೊಂಡು ಅವರೊಬ್ಬ ಯುದ್ಧ ಅಪರಾಧಿ ಎಂದು ಟೀಕಿಸಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಅಮೆರಿಕ ಅಧ್ಯಕ್ಷರು ಯುದ್ಧ ಪೀಡಿತ ದೇಶಕ್ಕೆ ಭೇಟಿ ನೀಡಿ ಯುದ್ಧ ಪೀಡಿತ ದೇಶದ ಜನರನ್ನು ಭೇಟಿಯಾಗುತ್ತಿರುವುದು ಇದೇ ಮೊದಲು. ಪ್ರಸ್ತುತ ಪೋಲೆಂಡ್‌ನಲ್ಲಿ ಸುಮಾರು 20 ಮಿಲಿಯನ್ ಉಕ್ರೇನಿಯನ್ ನಿರಾಶ್ರಿತರು ಇದ್ದಾರೆ. ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಅವರಿಂದ ಉಕ್ರೇನಿಯನ್ ನಿರಾಶ್ರಿತರ ಬಗ್ಗೆ ಬಿಡೆನ್ ಮಾಹಿತಿ ಪಡೆದರು. ನಿರಾಶ್ರಿತರು ಯುದ್ಧದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ ಮತ್ತು ಅವರ  ಅಸಹಾಯಕ ಸ್ಥಿತಿಯಲ್ಲಿದ್ದಾರೆಂದು ಆಂಡ್ರೆಜ್ ಡುಡಾ ವಿವರಿಸಿದರು.

ನಂತರ ಮಾತನಾಡಿದ ಬಿಡೆನ್, ಯುದ್ಧದ ಸಮಯದಲ್ಲಿ ಭದ್ರತಾ ಕಾರಣಗಳಿಂದಾಗಿ ಉಕ್ರೇನ್‌ಗೆ ಹೋಗಲು ಸಾಧ್ಯವಾಗಿಲ್ಲ ಇದರಿಂದ ನನಗೆ ತುಂಬಾ ಬೇಸರವಾಗಿದೆ.  ಉಕ್ರೇನ್ ಜನರು ನನ್ನನ್ನು ಕ್ಷಮಿಸಬೇಕು ಎಂದು ಕ್ಷಮೆ ಕೋರಿದ್ದಾರೆ. ಉಕ್ರೇನ್ ನಿರಾಶ್ರಿತರನ್ನು ಬೆಂಬಲಿಸುವಲ್ಲಿ ಪೋಲೆಂಡ್ ಮಾನವೀಯ ದೃಷ್ಟಿಕೋನವನ್ನು ಪ್ರದರ್ಶಿಸಿರುವುದು ಶ್ಲಾಘನೀಯ ಎಂದು ಬಿಡೆನ್ ಹೇಳಿದರು.

Share Post