International

ರಷ್ಯಾ ವಿರುದ್ಧ ಜಯ ಸಾಧಿಸಿದ್ದೇವೆ: ಹರ್ಷ ವ್ಯಕ್ತಪಡಿಸಿದ ಝಲೆನ್ಸ್ಕಿ

ಉಕ್ರೇನ್:‌ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ದೇಶ ರಷ್ಯಾದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ  ಗೆದ್ದಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ನ್ಯಾಯಾಲಯವು ರಷ್ಯಾ ತನ್ನ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತೀರ್ಪು ನೀಡಿದೆ. ಇದನ್ನು ಝೆಲೆನ್ ಸ್ಕಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ನ್ಯಾಯಾಲಯದ ಆದೇಶಗಳನ್ನು ರಷ್ಯಾ ಅನುಸರಿಸಬೇಕೆಂದು ಝೆಲೆನ್ಸ್ಕಿ ಒತ್ತಾಯಿಸಿದರು. ಇಲ್ಲದಿದ್ದರೆ ರಷ್ಯಾ ಮತ್ತಷ್ಟು ಏಕಾಂಗಿಯಾಗಲಿದೆ ಎಂದು ಎಚ್ಚರಿಸಿದರು.

ಉಕ್ರೇನ್ ವಿರುದ್ಧ ಸೇನಾ ಕ್ರಮವನ್ನು ತಕ್ಷಣವೇ ನಿಲ್ಲಿಸಿ – ICJ ಆದೇಶ
ಮೂರು ವಾರಗಳಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಪ್ರಮುಖ ನಿರ್ದೇಶನ ನೀಡಿದೆ. ಉಕ್ರೇನ್ ವಿರುದ್ಧದ ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದರು. ಇದಲ್ಲದೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಿಂದ ರಷ್ಯಾದ ಭದ್ರತಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದೆ.

ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಹಲವಾರು ನಗರಗಳಲ್ಲಿ ಉಳಿದಿರುವ ನಾಗರಿಕರನ್ನು ಸ್ಥಳಾಂತರಿಸಲು ತಮ್ಮ ದೇಶದ ಮೇಲೆ ನೋ-ಫ್ಲೈ ವಲಯವನ್ನು ಘೋಷಿಸುವಂತೆ ಜೆಲೆನ್ಸ್ಕಿ ಮನವಿ ಮಾಡಿದರು. ರಷ್ಯಾದ ಪಡೆಗಳು ಉಕ್ರೇನ್ ಮೇಲೆ 1,000 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿವೆ ಎಂದು ಆರೋಪ ಮಾಡಿದ್ರು.

ಅಮೆರಿಕಾ ಉಭಯ ಸದನಗಳಲ್ಲಿ ವರ್ಚುವಲ್‌ ಮೂಲಕ ಮಾತನಾಡಿದ ಝೆಲೆನ್ಸ್ಕಿ, 9/11 ದಾಳಿಯ ಜೊತೆಗೆ ಡಿಸೆಂಬರ್ 1941 ರ ಪರ್ಲ್ ಹಾರ್ಬರ್‌ನ ಬಾಂಬ್ ಸ್ಫೋಟಗಳನ್ನು ನೆನಪಿಸಿಕೊಂಡರು. ಕಳೆದ ಮೂರು ವಾರಗಳಿಂದ ಉಕ್ರೇನ್‌ನಲ್ಲಿ ಪ್ರತಿದಿನ ಇದೇ ರೀತಿಯ ದಾಳಿಗಳು ನಡೆಯುತ್ತಿವೆ ಎಂದು ಅವರು ವಿಷಾದಿಸಿದರು. ಜಗತ್ತಿನಲ್ಲಿ ನಾಯಕನಾಗುವುದು ಎಂದರೆ ಶಾಂತಿ ಪ್ರಕ್ರಿಯೆಯನ್ನು ಮುನ್ನಡೆಸುವುದು ಮುಕ್ಯ ಎಂದರು. ಜೋ ಬಿಡೆನ್‌ ಅವರನ್ನು ಗಮನದಲ್ಲಿಟುಕೊಂಡು ಈ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ನಮ್ಮ ಹೋರಾಟ ಕೇವಲ ಉಕ್ರೇನ್ ಅನ್ನು ರಕ್ಷಿಸಲು ಅಲ್ಲ, ಯುರೋಪಿಯನ್ ಹಾಗೂ ವಿಶ್ವದ ಮೌಲ್ಯಗಳಿಗಾಗಿ ಹೋರಾಡುತ್ತಿರುವುದಾಗಿ ಝಲೆನ್ಸ್ಕಿ ತಿಳಿಸಿದ್ರು.

Share Post