International

ಪೆಸಿಫಿಕ್‌ ದ್ವೀಪ ರಾಷ್ಟ್ರ ಟೊಂಗಾಗೆ US$ 200,000 ಪರಿಹಾರ ಘೋಷಿಸಿದ ಭಾರತ

ದೆಹಲಿ: ಜನವರಿ 15ರಂದು ಹುಂಗಾ ಟೊಂಗಾ ಹುಂಗಾ ಹಾಪೇಯ್‌ ಎಂಬ ಜ್ವಾಲಾಮುಖಿ ಸ್ಫೋಟಿಸಿ ಇಡೀ ದೀಪ ರಾಷ್ಟ್ರವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದು ಮಹಾಯುದ್ಧದಲ್ಲಿ ಅಮೆರಿಕಾ ಜಪಾನ್‌ ಮೇಲೆ ಹಾಕಿದ ಅಣುಬಾಂಬ್‌ಗಿಂತ ನೂರು ಪಟ್ಟು ಶಕ್ತಿಯಿಂದ ಕೂಡಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಬಾಹ್ಯ ಸಂಪರ್ಕ ಕಳೆದುಕೊಂಡಿ ಸಂಕಷ್ಟದಲ್ಲಿ ಸಿಲುಕಿರುವ ಟೊಂಗಾಗೆ ಇದೀಗ ಭಾರತ US$ 200,000 ತಕ್ಷಣದ ಪರಿಹಾರ ನೆರವು ಘೋಷಿಸಿದೆ. ಅಲ್ಲಿ ಉಂಟಾದ ಹಾನಿಯಿಂದ ಜನರ ಮೂಲ ಸೌಕರ್ಯಕ್ಕಾಗಿ ನೆರವು ಘೋಷಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಟೊಂಗಾದಲ್ಲಿ ಉಂಟಾಗಿರುವ ದುರಂತ ಅಪಾರ ಪರಿಣಾಮ ಬೀರಿದೆ. ಸುಮಾರು 65ಕಿಮೀ ಭೂಭಾಗ ನಿಷ್ಪ್ರಯೋಜಕವಾಗಿದೆ.  ಈ ಅಭೂತಪೂರ್ವ ದುರಂತದಿಂದ ಉಂಟಾದ ಹಾನಿ ಮತ್ತು ವಿನಾಶಕ್ಕಾಗಿ ಭಾರತವು ಸರ್ಕಾರ ಟೊಂಗಾ  ಜನರಿಗೆ ಸಹಾಯಹಸ್ತ ಚಾಚಿದೆ.  ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆ (ಎಫ್‌ಐಪಿಐಸಿ) ಅಡಿಯಲ್ಲಿ ನಿಕಟ ಸ್ನೇಹಿತ ಮತ್ತು ಪಾಲುದಾರರಾಗಿ ಟೋಂಗಾದ  ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ, ಭಾರತ ಸರ್ಕಾರವು  ಪುನರ್ವಸತಿಯನ್ನು ಬೆಂಬಲಿಸಲು US $ 200,000 ತಕ್ಷಣದ ಪರಿಹಾರವನ್ನು ಘೋಷಿಸಿದೆ.

2018 ರಲ್ಲಿ ಗೀತಾ ಚಂಡಮಾರುತದ ಸಂದರ್ಭದಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾದ ಬಿಕ್ಕಟ್ಟು ಮತ್ತು ವಿನಾಶದ ಸಮಯದಲ್ಲಿ ಭಾರತವು ಟೊಂಗಾದ ಪರವಾಗಿ ದೃಢವಾಗಿ ನಿಂತಿದೆ. ಭಾರತ ಅಷ್ಟೇ ಅಲ್ಲದೆ ಜಪಾನ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾ ದೇಶಗಳು ನೆರವು ರವಾನಿಸುತ್ತಿವೆ ಎಂದು ತಿಳಿದುಬಂದಿದೆ.

Share Post