International

ಉಕ್ರೇನ್‌ ಯುದ್ಧದಲ್ಲಿ ಸಾವಿರಾರು ಯೋಧರು ಬಲಿ; ಕೊನೆಗೂ ನಷ್ಟ ಒಪ್ಪಿಕೊಂಡ ರಷ್ಯಾ

ಮಾಸ್ಕೊ: ಉಕ್ರೇನ್‌ ವಿರುದ್ಧ ರಷ್ಯಾ ಫೆಬ್ರವರಿ 24 ರಿಂದ ಯುದ್ಧ ನಡೆಸುತ್ತಿದೆ. ಇದಕ್ಕೆ ಉಕ್ರೇನ್‌ ಸೈನಿಕರು ಕೂಡಾ ಭಾರೀ ಪ್ರತಿರೋಧ ತೋರಿಸುತ್ತಿದ್ದಾರೆ. ಇದ್ರಿಂದಾಗಿ ಸಾವಿರಾರು ರಷ್ಯಾ ಸೈನಿಕರು ಬಲಿಯಾಗಿದ್ದಾರೆ. ಉಕ್ರೇನ್‌ ಹೇಳುವ ಪ್ರಕಾರ ರಷ್ಯಾದ 12 ಸಾವಿರಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ. ಆದ್ರೆ ಇದನ್ನು ರಷ್ಯಾ ಅಧಿಕೃತವಾಗಿ ಒಪ್ಪಿರಲಿಲ್ಲ. ಆದ್ರೆ, ಉಕ್ರೇನ್‌ ಪ್ರತಿರೋಧಕ್ಕೆ ಭಾರಿ ನಷ್ಟ ಅನುಭವಿಸಿರುವುದನ್ನು ರಷ್ಯಾ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಇದು ಒಂದು ದೊಡ್ಡ ದುರಂತ. ನಾವು ಯುದ್ಧ ಅಪಾರ ಪ್ರಮಾಣದ ಯೋದರನ್ನು ಕಳೆದುಕೊಂಡಿದ್ದೇವೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಕೀವ್‌, ಖಾರ್ಕೀವ್‌ ಸೇರಿದಂತೆ ಹಲವು ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಭಾರಿ ಪ್ರಯತ್ನ ಮಾಡಿತು. ಆದ್ರೆ ಉಕ್ರೇನ್‌ ಸೈನಿಕರು ಇದಕ್ಕೆ ದಿಟ್ಟ ಉತ್ತರ ನೀಡಿದರು. ಈ ಹಿನ್ನೆಲೆಯಲ್ಲಿ ರಷ್ಯಾಗೆ ಅಂದುಕೊಂಡು ಸುಲಭವಾಗಲಿಲ್ಲ ಈ ಯುದ್ಧ. ಸುಲಭವಾಗಿ ಉಕ್ರೇನ್‌ ಸೇನೆಯನ್ನು ಮಟ್ಟ ಹಾಕಬಹುದು ಎಂದುಕೊಂಡಿದ್ದ ರಷ್ಯಾ, ಈಗ ಭಾರಿ ಬೆಲೆ ತೆತ್ತಿದೆ.

Share Post