Cinema

ʼ777 ಚಾರ್ಲಿʼ ಚಿತ್ರತಂಡದಿಂದ ಬಿಗ್‌ ಅಪ್ಡೇಟ್

ಬೆಂಗಳೂರು : ರಕ್ಷಿತ್‌ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್‌ ಮುಗಿಸಿದೆ. ಇನ್ನು ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯವರು ಥಂಬ್ಸ್‌ ಅಪ್‌ ನೀಡಿದ್ದಾರೆ ಎಂದು ರಕ್ಷಿತ್‌  ಹೇಳಿಕೊಂಡಿದ್ದಾರೆ.

U/A ಪ್ರಮಾಣ ಪತ್ರ ಸ್ವೀಕರಿಸಿರುವ 777 ಚಾರ್ಲಿ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರುವ ಮುನ್ಸೂಷನೆ ಕೊಟ್ಟಿದ್ದಾನೆ. ಇನ್ನು ರಕ್ಷಿತ್‌ ಶೆಟ್ಟಿಯವರು ಈ ವಿಷಯವನ್ನು ತಮ್ಮ ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಚಿತ್ರವನ್ನು ಬರೆದು ನಿರ್ದೇಶಿಸುತ್ತಿರುವ ಕಿರಣ್‌ ರಾಜ್‌ ಕೂಡ ಸಾಕಷ್ಟು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಈ ಚಿತ್ರವು ಕಳೆದ ಡಿಸೆಂಬರ್‌ 31ಕ್ಕೆ ತೆರೆಗೆ ಬರಲು ಸಜ್ಜಾಗಿತ್ತು ಆದರೆ ಹಲವು ಕಾರಣಗಳಿಂದ ಪೋಸ್ಟ್‌ ಪೋನ್‌ ಮಾಡಿತ್ತು ಚಿತ್ರತಂಡ. ಸಿನಿಮಾಗೆ ಯು ಪ್ರಮಾಣ ಪತ್ರ ದೊರಕು ಸಾಧ್ಯತೆ ಇತ್ತು. ಆದರೆ ಸಿನಿಮಾದಲ್ಲಿ ಧರ್ಮ ಎಂಬುವ ಪಾತ್ರ ಸಿಗರೇಟ್‌ ಮತ್ತು ಬಿಯರ್‌ ವ್ಯಸನಿಯಾಗಿರುವ ಕಾರಣ ನಮಗೆ ಯು ಸರ್ಟಿಫಿಕೇಟ್‌ ಕೈ ತಪ್ಪಿದೆ ಎಂದು ನಿರ್ದೇಶಕ ಕಿರಣ್‌ ರಾಜ್‌ ವಿವರಿಸಿದ್ದಾರೆ.

ಪಂಚ ಭಾಷೆಗಳಲ್ಲಿ ತೆರೆಕಾಣುತ್ತಿರುವ ಈ ಚಿತ್ರದಲ್ಲಿ ಸಂಗೀತ ಶೃಂಗೇರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಜ್‌ ಶೆಟ್ಟಿ, ದಾನಿಶ್‌ ಸೇಠ್‌ ಕೂಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ,.

Share Post