InternationalScience

ನಿರ್ಣಾಯಕ ಘಟ್ಟದಲ್ಲಿ ಇಸ್ರೋ ಆದಿತ್ಯ ಮಿಷನ್

ನವದೆಹಲಿ; ಸೂರ್ಯನಲ್ಲಿ ಅಡಗಿರುವ ರಹಸ್ಯಗಳನ್ನು  ತಿಳಿಯಲು ಇಸ್ರೋ ಸಂಸ್ಥೆ ಕೈಗೊಂಡಿರುವ ಆದಿತ್ಯ ಮಿಷನ್ ನಿರ್ಣಾಯಕ ಹಂತ ತಲುಪಿದೆ.

 

ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಆದಿತ್ಯ ಎಲ್-1 ಉಪಗ್ರಹ ಉಡಾವಣೆ ಮಾಡಲಾಗಿತ್ತು. ಇಂದು ಇದು ನಿಗದಿತ ಲಾಂಗ್ರೆಜಿಯನ್ ಬಿಂದು ‘ಎಲ್‌-1’ ತಲುಪಲಿದೆ. ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿರುವ ಎಲ್​-1 ಕಕ್ಷೆಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ.

  ಆದಿತ್ಯ ಎಲ್​-1 ಮಿಷನ್ 2022ರ ಸೆಪ್ಟೆಂಬರ್ 22ಂದು ಆಂಧ್ರದ ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ ಸಿ-57 ಉಡಾವಣೆ ಮಾಡಲಾಗಿತ್ತು. ಈ ನೌಕೆ ಎಲ್​-1 ಬಿಂದು ತಲುಪಿದ ನಂತರ ಸೌರ ಮಿಷನ್ ತನ್ನ ಕಾರ್ಯವನ್ನು ಮರು ಆರಂಭಿಸಲಿದೆ.

ಭೂಮಿ ಮತ್ತು ಸೂರ್ಯನ ನಡುವಿನ ಗುರುತ್ವಾಕರ್ಷಣೆಯ ಸ್ಥಿರತೆಯ ಪ್ರದೇಶ ಎಲ್​-1 ಆಗಿದೆ. ಇಲ್ಲಿ ಸೂರ್ಯ ಹಾಗೂ ಸೌರ ಚಂಡಮಾರುತಗಳನ್ನ ಅಧ್ಯಯನ ಮಾಡಲಾಗುತ್ತದೆ. ಇಂದು ಸಂಜೆ 4 ಗಂಟೆಗೆ ಎಲ್​-1 ಲಾಂಗ್ರೇಜ್ ಪಾಯಿಂಟ್ ತಲುಪಲಿದ್ದು, ಲಾಂಗ್ರೇಜಿಯನ್ ಪಾಯಿಂಟ್​​​-1ರಲ್ಲಿ ಆದಿತ್ಯ ಎಲ್-1 ನೆಲೆಗೊಳ್ಳಲಿದೆ.. ಮುಂದಿನ 5 ವರ್ಷಗಳವೆಗೆ ನಿರಂತರವಾಗಿ ಸೂರ್ಯನ ಅಧ್ಯಯನ ಮಾಡಲಿದೆ..

Share Post