ಅಫ್ಘಾನಿಸ್ತಾನದಲ್ಲಿ ಭಾರಿ ಹಿಮಪಾತ; 20 ದಿನದಲ್ಲಿ 42 ಮಂದಿ ಸಾವು..!
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಕಳೆದ ಒಂದು ತಿಂಗಳಿಂದ ಭಾರಿ ಹಿಮಪಾತವಾಗುತ್ತಿದೆ. ಇದ್ರಿಂದ ಹಲವಾರು ಸಾವುನೋವುಗಳು ಸಂಭವಿಸುತ್ತಿವೆ. ಇಲ್ಲಿನ ಹದಿನೈದು ಪ್ರಾಂತ್ಯಗಳಲ್ಲಿ ಸತತ ಹಿಮಪಾತವಾಗುತ್ತಿದೆ. ಈ ಭಾಗದಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಹಿಮಪಾತಕ್ಕೆ 42ಕ್ಕೂ ಹೆಚ್ಚು ಬಲಿಯಾಗಿದ್ದಾರೆ. 120ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಭಾರಿ ಹಿಮಪಾತದಿಂದಾಗಿ ಹೆದ್ದಾರಿಗಳೆಲ್ಲಾ ಹಿಮದಲ್ಲಿ ಮುಚ್ಚಿಹೋಗುತ್ತಿವೆ. ರಸ್ತೆಯಲ್ಲಿ ನಿಂತಿದ್ದ ವಾಹನಗಳು ಹಿಮದಲ್ಲಿ ಮುಳುಗಿಹೋಗುತ್ತಿವೆ. ಹೀಗೆ ಕಳೆದ ವಾರ ಕಾರಿನಲ್ಲಿ ಕುಳಿತಿದ್ದವರು ಹಾಗೆಯೇ ಸಾವನ್ನಪ್ಪಿದ್ದಾರೆ. ಅದ್ರಲ್ಲೂ ಹಿಮಪಾತಕ್ಕೆ ಸಿಲುಕಿ ಎರಡು ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ.