CrimeInternational

ಈಕೆ 31 ಸಾವಿರ ಕೋಟಿ ವಂಚಕಿ; ಹಿಡಿದುಕೊಟ್ಟವರಿಗೆ 1 ಲಕ್ಷ ಡಾಲರ್‌ ಬಹುಮಾನ..!

   ಸುಮಾರು 31 ಸಾವಿರ ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ ಆರೋಪದ ಮೇಲೆ ಅಮೆರಿಕ ಒಬ್ಬ ಮಹಿಳೆಯನ್ನು ಹುಡುಕುತ್ತಿದೆ. ಆಕೆಯನ್ನು ಟಾಪ್-10 ಮೋಸ್ಟ್ ವಾಂಟೆಡ್ ಲಿಸ್ಟ್ ಗೆ ಸೇರಿಸಿರುವ ಎಫ್ ಬಿಐ, ಆಕೆ ಇರುವ ಬಗ್ಗೆ ಮಾಹಿತಿ ನೀಡಿದವರಿಗೆ ಸುಮಾರು ಒಂದು ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.

   ಬಲ್ಗೇರಿಯಾದ ರೂಹಾ ಇಗ್ನಾಸಿವಾ ಎಂಬಾಕೆ 2014 ರಲ್ಲಿ ‘ಒನ್ ಕಾಯಿನ್’ ಹೆಸರಿನ ಕ್ರಿಪ್ಟೋ ಕರೆನ್ಸಿಯನ್ನು ಪರಿಚಯಿಸುವುದಾಗಿ ಘೋಷಿಸಿದ್ದಳು. ‘ಒನ್‌ ಕಾಯಿನ್‌’ ಮಾರಿದವರಿಗೆ ಕಮಿಷನ್ ಕೊಡತೊಡಗಿದಳು. ಹೀಗೆ ‘ಒನ್ ಕಾಯಿನ್’ ಮೂಲಕ ಸುಮಾರು 4 ಬಿಲಿಯನ್ ಡಾಲರ್ ಅಂದರೆ ಸುಮಾರು 31 ಸಾವಿರ ಕೋಟಿ ರೂ.ಗಳನ್ನು ಸಂಗ್ರಹ ಮಾಡಿ ರುಹಾ ಇಗ್ನಾಸಿವಾ ಎಸ್ಕೇಪ್‌ ಆಗಿದ್ದಾಳೆ ಎಂದು ತಿಳಿದುಬಂದಿದೆ.

    ರುಹಾ ಇಗ್ನಾಸಿವಾ 2017 ರಿಂದ ನಾಪತ್ತೆಯಾಗಿದ್ದಾಳೆ. ‘OneCoin’ ಯಾವುದೇ ನೈಜ ಮೌಲ್ಯವನ್ನು ಹೊಂದಿಲ್ಲ ಮತ್ತು ಇತರ ಕ್ರಿಪ್ಟೋ ಕರೆನ್ಸಿಗಳಂತೆ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಆಧರಿಸಿಲ್ಲ ಎಂದು FBI ಬಹಿರಂಗಪಡಿಸಿದೆ. ಕ್ರಿಪ್ಟೋ ಕರೆನ್ಸಿಯ ಸೋಗಿನಲ್ಲಿ ಇದು ಟೋಪಿ ಯೋಜನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಸರಿಯಾದ ಸಮಯದಲ್ಲಿ ಆಕೆ ಕ್ರಿಪ್ಟೋ ಕರೆನ್ಸಿಯನ್ನು ವಂಚನೆ ಮಾಡಲೆಂದೇ ತೆರೆದುಕೊಂಡಿದ್ದಳು. ಕ್ರಿಪ್ಟೋ ಕರೆನ್ಸಿ ಪ್ರಾರಂಭವಾಗಿದೆ ಮತ್ತು ಮೊದಲು ಖರೀದಿಸಿದವರಿಗೆ ದೊಡ್ಡ ಲಾಭ ಬರುತ್ತದೆ ಎಂದು ಪ್ರಚಾರ ಮಾಡಿದ್ದಳು. ಎಫ್‌ಬಿಐನ ಟಾಪ್-10 ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಏಕೈಕ ಮಹಿಳೆ ರುಹಾ ಇಗ್ನಾಸಿವಾನೆ.

    ಜೇಮೀ ಬಾರ್ಟ್ಲೆಟ್ ಅವರ ‘ದಿ ಮಿಸ್ಸಿಂಗ್ ಕ್ರಿಪ್ಟೋ ಕ್ವೀನ್’ ಪುಸ್ತಕದಲ್ಲಿ ರುಹಾ ಅವರ ಕಥೆಯನ್ನು ಬರೆಯಲಾಗಿದೆ. ‘ಎಫ್‌ಬಿಐನ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಆಕೆಯ ಹೆಸರು ಸೇರಿರುವುದರಿಂದ ಶೀಘ್ರದಲ್ಲೇ ಆಕೆ ಪೊಲೀಸರಿಗೆ ಸಿಗುವ ಸಾಧ್ಯತೆ ಇದೆ. 2017ರಲ್ಲಿ ಆಕೆ ತಲೆಮರೆಸಿಕೊಂಡ ನಂತರ ನಡೆದ ಪ್ರಮುಖ ಬೆಳವಣಿಗೆ ಇದಾಗಿದೆ.

ರುಹಾ ಇಗ್ನಾಸಿವಾ ಅವರು 2017 ರಲ್ಲಿ ಬಲ್ಗೇರಿಯಾದಿಂದ ಗ್ರೀಸ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅನಂತರ ಆಕೆ ಪತ್ತೆಯಾಗಿಲ್ಲ. ಹೀಗಾಗಿ ಆಕೆ ಬದುಕಿದ್ದಾಳಾ ಎಂಬುದರ ಬಗ್ಗೆಯೂ ಅನುಮಾನ ಮೂಡಿದೆ. 

Share Post