ಹುಡುಗಿಯರನ್ನು ಪಟಾಯಿಸೋ ಟ್ರೈನಿಂಗ್ ಕೊಡ್ತಾಳೆ ಮಾಜಿ ಪೊಲೀಸ್ ಅಧಿಕಾರಿ!
ಆಸ್ಟ್ರೇಲಿಯಾ; ಆಸ್ಟ್ರೇಲಿಯಾದಲ್ಲಿ ಪೊಲೀಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅಲಿಸಿಯಾ ಎಂಬ 32 ವರ್ಷದ ಮಹಿಳೆ ಕೆಲಸಕ್ಕೆ ರಾಜೀನಾಮೆ ನೀಡಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ..? ಈ ಸುದ್ದಿ ಕೇಳಿದರೆ ನಿಮಗೆ ಅಚ್ಚರಿ ಯಾಗುತ್ತೀರಿ.. ಯಾಕಂದ್ರೆ ಈಕೆ ಪೊಲೀಸ್ ಕೆಲಸ ಬಿಟ್ಟು, ಹುಡುಗಿಯರನ್ನು ಪಟಾಯಿಸುವುದು ಹೇಗೆ, ಅವರೊಂದಿಗೆ ಡೇಟಿಂಗ್ ಮಾಡುವುದು ಹೇಗೆ ಎಂಬುದರ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದಾಳೆ..
ಮೊದಲಿಗೆ ಇಂತಹದ್ದೂ ಒಂದು ಟ್ರೈನಿಂಗ್ ಇರುತ್ತಾ ಎಂದು ಎಲ್ಲರೂ ನಗಾಡಿದ್ದರು.. ಆದ್ರೆ ಈ ಟ್ರೈನಿಂಗ್ ಶುರು ಮಾಡಿದ ಮೇಲೆ ನೂರಾರು ಹುಡುಗರು ಟ್ರೈನಿಂಗ್‌ಗೆ ಸೇರಿದ್ದಾರೆ.. ಇದರಿಂದ ಈ ಮಾಜಿ ಪೊಲೀಸ್ ಅಧಿಕಾರಿ ತಾನು ತೆಗೆದುಕೊಳ್ಳುತ್ತಿದ್ದ ಸಂಬಳದ ಹಲವು ಪಟ್ಟು ಸಂಪಾದನೆ ಮಾಡುತ್ತಿದ್ದಾಏ..
ಕೆಲವು ಪುರುಷರಿಗೆ ಮಹಿಳೆಯರೊಂದಿಗೆ ಮಾತನಾಡಬೇಕು. ಆಕೆಯ ಸ್ನೇಹ ಬೆಳೆಸಬೇಕು ಎಂದು ಆಸೆ ಇರುತ್ತದೆ. ಆದ್ರೆ ಧೈರ್ಯವಿರೋದಿಲ್ಲ.. ಅಂತಹವರಿಗೆ ಧೈರ್ಯ ತುಂಬೋದು, ಅತ್ಮವಿಶ್ವಾಸ ತುಂಬೋದು, ಡೇಟಿಂಗ್ ನಂತರ ಸಂಬಂಧ ಹೇಗೆ ಮುಂದುವರೆಸಬೇಕು ಎಂಬುದನ್ನು ನಾನು ಹೇಳಿಕೊಡುತ್ತೇನೆ ಅಂತ ಮಹಿಳೆ ಹೇಳಿಕೊಂಡಿದ್ದಾಳೆ.. ಈಕೆ ಪ್ರತಿ ತಿಂಗಳೂ 5 ರಿಂದ 7 ಲಕ್ಷ ರೂಪಾಯಿ ಗಳಿಸುತ್ತಿದ್ದಾಳಂತೆ..