InternationalNational

ಉಕ್ರೇನ್‌ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತು: ಟ್ವೀಟ್‌ ಮಾಡಿ ಧನ್ಯವಾದ ತಿಳಿಸಿದ ಝಲೆನ್ಸ್ಕಿ

ಉಕ್ರೇನ್:‌ ರಷ್ಯಾದಿಂದ ಉಕ್ರೇನ್‌ನಲ್ಲಿ ಉಂಟಾಗಿರುವ ಯುದ್ಧ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರೊಂದಿಗೆ ಸುಮಾರು 35 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿ ಮಾಹಿತಿಯನ್ನು ಪಡೆದಿದ್ದಾರೆ.

ಉಕ್ರೇನ್‌ನಲ್ಲಿನ ಸಂಘರ್ಷ ಮತ್ತು ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಮಾತುಕತೆಗಳ ಕುರಿತು ಝೆಲೆನ್ಸ್ಕಿ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ಉಕ್ರೇನ್‌ನಲ್ಲಿನ ಪರಿಸ್ಥಿತಿ ಮತ್ತು ಭಾರತೀಯರ ಸ್ಥಳಾಂತರ ಸೇರಿದಂತೆ ಭಾರತೀಯ ಮಾನವೀಯ ಸಹಕಾರದ ಕುರಿತು ಪ್ರಧಾನಿ ಮೋದಿ ಝೆಲೆನ್ಸ್‌ಕಿಯೊಂದಿಗೆ ಚರ್ಚೆ ನಡೆಸಿದ್ದಾರೆ.

ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸಬೇಕೆಂಬ ತನ್ನ ಕರೆಯನ್ನು ಮೋದಿ ಪುನರುಚ್ಚರಿಸಿ, ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಉಭಯ ದೇಶಗಳನ್ನು ಒತ್ತಾಯಿಸಿದರು. ಉಕ್ರೇನ್‌ನಿಂದ 20,000ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ಸಹಕಾರ ನೀಡಿದ ಉಕ್ರೇನ್ ಅಧಿಕಾರಿಗಳಿಗೆ ಮೋದಿ ಧನ್ಯವಾದ ಹೇಳಿದರು.

ಉಕ್ರೇನ್‌ನಲ್ಲಿ ಇನ್ನೂ ಉಳಿದಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿ, ಉಕ್ರೇನ್‌ನಲ್ಲಿರುವ ಉಳಿದ ಭಾರತೀಯರನ್ನು ಸ್ಥಳಾಂತರಕ್ಕೆ ಸಹಕಾರ ನೀಡುವಂತೆ ಝಲೆನ್ಸ್ಕಿ ಬಳಿ ಮನವಿ ಮಾಡಿಕೊಂಡರು.

ಈ ಬಗ್ಗೆ ಉಕ್ರೇನ್‌ ಅಧ್ಯಕ್ಷ ಝಲೆನ್ಸ್ಕಿ ಟ್ವೀಟ್‌ ಮಾಡಿ ರಷ್ಯಾದ ಆಕ್ರಮಣವನ್ನು ಧೈರ್ಯವಾಗಿ ಎದುರಿಸುವ ಬಗ್ಗೆ ಪ್ರಧಾನಿ @narendramodi ಅವರಿಗೆ ಮಾಹಿತಿ ನೀಡಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ.

Share Post