InternationalScienceTechTechnology

ರಾಕೆಟ್‌ ಪರೀಕ್ಷೆ ಸಮಯದಲ್ಲಿ ಸ್ಫೋಟ; ಜಪಾನ್‌ ಯೋಜನೆಗೆ ಹಿನ್ನಡೆ

ಟೋಕಿಯೊ; ಇಂದು ಭಾರತ ಚಂದ್ರಯಾನ-3ನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇತ್ತ ಜಪಾನ್‌ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿಪಡಿಸಿದ ರಾಕೆಟ್‌ನ್ನು ಇಂದು ಪರೀಕ್ಷೆ ಮಾಡಲಾಯಿತು. ಆಗ ಅದು ಸ್ಫೋಟಗೊಂಡಿದೆ. ಇದ್ರಿಂದ ಯಾವುದೇ ಹಾನಿಯಾಗಿಲ್ಲ. ಆದ್ರೆ ಜಪಾನ್‌ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಂತೂ ಆಗಿದೆ.

ಉತ್ತರ ಜಪಾನ್‌ನಲ್ಲಿರುವ ಏರೋಸ್ಪೇಸ್‌ ಎಕ್ಸ್‌ ಪ್ಲೋರೇಷನ್‌ ಏಜೆನ್ಸಿ ಟೆಸ್ಟಿಂಗ್‌ ಕೇಂದ್ರದಲ್ಲಿ ಎಪ್ಸಿಲಾನ್‌ ಎಸ್‌. ಎಂಬ ಎಂಜಿನ್‌ ಸ್ಪೋಟಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮೂರನೇ ವೈಫಲ್ಯ ಎಂದು ತಿಳಿದುಬಂದಿದೆ. ಕಳೆದ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲೂ ಪ್ರಯೋಗ ನಡೆಸಿದ್ದು, ಆಗಲೂ ವೈಫಲ್ಯ ಉಂಟಾಗಿತ್ತು.

Share Post