National

ರೈಲು ಅಪಘಾತಗಳಿಗೆ ಬ್ರೇಕ್:‌ ಎರಡು ರೈಲುಗಳ ನಡುವಿನ ಅಪಘಾತ ತಡೆಯಲು ಕವಚ್‌ ತಂತ್ರಜ್ಞಾನ

ದೆಹಲಿ: ಎರಡು ರೈಲುಗಳ ನಡುವೆ ನಡೆಯುವ ಅಪಗಾತಗಳನ್ನು ತಪ್ಪಿಸಲು ʻಕವಚ್‌ʼ ಎಂಬ ತಂತ್ರಜ್ಞಾನದ ಮೂಲಕ ತಪ್ಪಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಯೋಜನೆ ಆರ್ಮರ್ ಪ್ರೋಗ್ರಾಂ ಈಗ ದಕ್ಷಿಣ ಮಧ್ಯ ರೈಲ್ವೆಗೆ ಸೇರ್ಪಡೆಯಾಗಿದೆ. ದಕ್ಷಿಣ ಮಧ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ನಿರ್ಣಾಯಕವಾಗಿರುವ ಸಿಕಂದರಾಬಾದ್-ವಾಡಿ-ಮುಂಬೈ ಮಾರ್ಗದಲ್ಲಿ ಕವಚ್ ಅಳವಡಿಸಲಾಗಿದೆ. ಅದರ ಭಾಗವಾಗಿ ಲಿಂಗಂಪಲ್ಲಿ – ವಿಕಾರಾಬಾದ್ ವಿಭಾಗವನ್ನು ಮೊದಲು ಕವಚ್ ವ್ಯಾಪ್ತಿಗೆ ತರಲಾಯಿತು.  ಈ ವಿಭಾಗದಲ್ಲಿ ರೈಲು ಅಪಘಾತಗಳು ನಡೆಯದಂತೆ ಜಾಗೃತಿ ವಹಿಸಲಿವೆ.

ಕವಚ್‌ನಲ್ಲಿ ವಿಸೇಷವಾದ ಸೈರನ್‌ಗಳನ್ನು ಟ್ರ್ಯಾಕ್‌ನಲ್ಲಿ ಅಳವಡಿಸಲಾಗಿದೆ. ಇದು ಎರಡು ರೈಲುಗಳು ಒಂದೇ ಹಳಿಯಲ್ಲಿ ಬಂದರು ಡಿಕ್ಕಿ ಹೊಡೆಯುವ ಅಥವಾ ಒಂದರ ಹಿಂದೆ ಒಂದಕ್ಕೊಂದು ವೇಗವಾಗಿ ಬಂದು ಡಿಕ್ಕಿ ಹೊಡೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತದೆ. ಅಪಘಾತ ಸಂಭವಿಸುವ ವೇಳೆ ಈ ಕವಚ್‌  ಸ್ವಯಂಚಾಲಿತವಾಗಿ ರೈಲುಗಳನ್ನು ನಿಲ್ಲಿಸುತ್ತವೆ. ಮೇಲಾಗಿ ರೆಡ್ ಸಿಗ್ನಲ್ ಇದ್ದರೂ ರೈಲು ವೇಗವಾಗಿ ಮುಂದೆ ಸಾಗುತ್ತಿದ್ರೂ ಕೂಡಾ ಶೀಲ್ಡ್ ಆಕ್ಟಿವೇಟ್ ಆಗಿ ತಕ್ಷಣ ರೈಲನ್ನು ನಿಲ್ಲಿಸಲು ಸಹಕಾರಿಯಾಗುತ್ತದೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಹೈದರಾಬಾದ್‌ನ ಲಿಂಗಂಪಲ್ಲಿ-ವಿಕಾರಾಬಾದ್ ವಿಭಾಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದರು. ಇಂದು ಪ್ರಾಯೋಗಿಕ ಚಾಲನೆ ವೇಳೆ ಕೇಂದ್ರ ರೈಲ್ವೇ ಸಚಿವ ಅಶ್ವಿನ್ ವೈಷ್ಣವ್ ಒಂದು ರೈಲಿನಲ್ಲಿದ್ದರೆ, ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷ ವಿನಯ್ ಕುಮಾರ್ ತ್ರಿಪಾಠಿ ಎದುರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಲಿಂಗಂಪಲ್ಲಿ-ವಿಕಾರಾಬಾದ್ ವಿಭಾಗದಲ್ಲಿ ಎರಡು ರೈಲುಗಳು ಎದುರಾದವು. ಆದಾಗ್ಯೂ ಎರಡು ರೈಲುಗಳ ನಡುವಿನ ಅಂತರವು ನಿಖರವಾಗಿ 380 ಮೀಟರ್ ಇರುವುದನ್ನು ಕವಚ್‌ ಗುರುತಿಸುತ್ತದೆ. ಕೂಡಲೇ ರೈಲಿನ ವೇಗ ಇದ್ದಕ್ಕಿದ್ದಂತೆ ಕಡಿಮೆ ಅಗುತ್ತದೆ.  ಕವಚ್ ಸ್ವಯಂಚಾಲಿತವಾಗಿ‌ ರೈಲಿನ ವೇಗವನ್ನು ನಿಯಂತ್ರಿಸುತ್ತದೆ ಎಂಬುದನ್ನು ಕೇಂದ್ರ ಸಚಿವರು ವಿಡಿಯೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚಿನ ಬಜೆಟ್ ಭಾಷಣದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈಲುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು 2,000 ಕಿ.ಮೀ ರೈಲ್ವೆ ಜಾಲವನ್ನು ಅತ್ಯಾಧುನಿಕ ತಂತ್ರಜ್ಞಾನದ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು. ಈ ತಂತ್ರಜ್ಞಾನ ಅಳವಡಿಸಿದರೆ 10,000 ವರ್ಷಗಳಿಗೆ ಎಲ್ಲೋ ಒಂದು ದುರಂತ ನಡೆಯುವುದಾಗಿ,  ಶೂನ್ಯ ಅಪಘಾತಗಳ ಗುರಿಯಾಗಿಸಿಕೊಂಡು ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರೆಡ್ ಸಿಗ್ನಲ್ ನೀಡಿದಾಗ ಚಾಲಕ ರೈಲನ್ನು ಓಡಿಸುತ್ತಿದ್ದರೂ ಶೀಲ್ಡ್ ಆಕ್ಟಿವೇಟ್ ಆಗಿ ತಕ್ಷಣ ರೈಲನ್ನು ನಿಲ್ಲುತ್ತದೆ ಎಂದರು.

 

Share Post