ಇಸ್ಲಾಮಿಕ್ ಪ್ರಾರ್ಥನೆ ಬಳಿಕ ಹಂದಿ ಮಾಂಸ ಸೇವನೆ; ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು
ಜಕಾರ್ತ; ಇಸ್ಲಾಮಿಕ್ ಪ್ರಾರ್ಥನೆ ಮಾಡಿ ಅನಂತರ ಹಂದಿ ಮಾಂಸ ತಿಂದಿದ್ದ ಟಿಕ್‌ಟಾಕ್ ಸ್ಟಾರ್ ಲೀನಾ ಮುಖರ್ಜಿಗೆ ಎರಡು ವರ್ಷ ಜೈಲು ಶಿಕ್ಷೆಯಾಗಿದೆ. ಇಂಡೋನೇಷ್ಯಾ ಕೋರ್ಟ್ ಈ ಆದೇಶ ಹೊರಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ವಿಡಿಯೋ ಮಾಡುವವರಿಗೆ ಎಚ್ಚರಿಕೆ ರವಾನಿಸಿದೆ.
ಲೀನಾ ಮುಖರ್ಜಿ ಬಾಲಿಯಲ್ಲಿ ಮಾರ್ಚ್ ತಿಂಗಳಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್ ಆಗಿತ್ತು. ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕೇಸ್ ಕೂಡಾ ದಾಖಲಿಸಲಾಗಿತ್ತು. ಹೀಗಾಗಿ ಕೋರ್ಟ್ ಧರ್ಮ ನಿಂದನೆ ಆರೋಪದ ಮೇಲೆ ಶಿಕ್ಷೆ ವಿಧಿಸಿದ್ದು, 16,245 ಡಾಲರ್ ದಂಡವನ್ನೂ ವಿಧಿಸಿದೆ.