CrimeNational

ಒಂದೂವರೆ ವರ್ಷದ ಮಗುವಿನ ಬಾಯಿಗೆ ಸಿಗರೇಟ್‌ ಇಟ್ಟ ಮಹಾತಾಯಿ ಈಕೆ!

ಅಸ್ಸಾಂ; ಮಹಿಳೆಯೊಬ್ಬರು ತನ್ನ 20 ತಿಂಗಳ ಮಗುವಿಗೆ ಸಿಗರೇಟ್‌ ಸೇದಿಸಲು ಹಾಗೂ ಮದ್ಯಪಾನ ಮಾಡಿಸಲು ಯತ್ನಿಸಿದ್ದಾಳೆ.. ಪುಟ್ಟ ಮಗು ಸಿಗರೇಟ್‌ ಘಾಟಿಗೆ ಅಳುತ್ತಿದ್ದರೂ ಬಲವಂತದಿಂದ ಸಿಗರೇಟ್‌ ಸೇದಿಸಲು ಯತ್ನಿಸಲಾಗಿದೆ.. ಜೊತೆಗೆ ಮದ್ಯ ಕುಡಿಸುವುದಕ್ಕೂ ಪ್ರಯತ್ನ ಮಾಡಲಾಗಿದೆ.. ಅಸ್ಸಾಂನ ಸಿಲ್ಚಾರ್ನ್‌ ಎಂಬಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ,,

ಕಳೆದ ಬುಧವಾರ ರಾತ್ರಿ ಸಿಲ್ಚಾರ್ನ ಚೆಂಗ್ಕುರಿಯಲ್ಲಿ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದಾಳೆ.. ಮಗುವಿಗೆ ಬಲವಂತವಾಗಿ ಧೂಮಪಾನ, ಮದ್ಯಪಾನ ಮಾಡಿಸಿದ್ದಾಳೆ.. ಇದರ ಜೊತೆ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾಳೆ.. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು, ಸ್ಥಳಕ್ಕೆ ಭೆಟಿ ನೀಡಿ ಮಹಿಳೆಯನ್ನು ಬಂಧಿಸಿದ್ದಾರೆ..

ಪ್ರಸ್ತುತ, ತಾಯಿ ಮತ್ತು ಮಗು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯೂಸಿ) ವಶದಲ್ಲಿದ್ದಾರೆ. ತಾಯಿ ಮಗುವಿಗೆ ಬಲವಂತ ಮಾಡುವ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ..

 

Share Post