BengaluruCrime

ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ ಅಂತಿದ್ದಾರೆ ಕಿರಾತಕ ನಟಿ..!

ಬೆಂಗಳೂರು; ನಟಿ ಓವಿಯಾ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಗೊತ್ತಿಲ್ಲ ಅಂದ್ರೆ ರಾಕಿಂಗ್‌ ಸ್ಟಾರ್‌ ಯಶ್‌ ನಟಿಸಿರುವ ಕಿರಾತಕ ಸಿನಿಮಾದಲ್ಲಿ ನಟಿಸಿರುವ ನಟಿ ಈಕೆ. ಈ ನಟಿ ನೀಡಿರುವ ಹೇಳಿಕೆ ಈಗ ಸಾಕಷ್ಟು ಚರ್ಚೆಯಲ್ಲಿದೆ. ಯಾಕಂದ್ರೆ ಅವರು ವೇಶ್ಯಾವಾಟಿಕೆ ಕುರಿತಂತೆ ಮಾತನಾಡಿದ್ದಾರೆ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡಬೇಕೆಂದು ಹೇಳಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಆರಂಭವಾಗಿದೆ.

ಅತ್ಯಾಚಾರಗಳು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿರುವ ನಟಿ ಓವಿಯಾ, ವೇಶ್ಯಾವಾಟಿಕೆ ಕಾನೂನುಬದ್ಧ ಮಾಡಬೇಕು. ಆಗ ಮಾತ್ರ ಅತ್ಯಾಚಾರಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಹೇಳಿದ್ದಾರೆ. ಬಹುತೇಕ ಎಲ್ಲರಿಗೂ ಲೈಂಗಿಕ ಆಸಕ್ತಿಗಳಿವೆ. ಆದ್ರೆ ಅವನ್ನು ಅದುಮಿಟ್ಟುಕೊಂಡು ಮುಖವಾಡ ಧರಿಸಿಕೊಂಡು ಬದುಕುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಲೈಂಗಿಕ ಶಿಕ್ಷಣ ಅಗತ್ಯ. ಜೊತೆಗೆ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಬೇಕು ಎಂದಿದ್ದಾರೆ.

 

 

Share Post