ತಿನ್ನಬಹುದಾದ ಪರ್ವತ..!; ಇದು ಕಾಮನಬಿಲ್ಲು ಗುಡ್ಡದ ವಿಶೇಷತೆ..!
ಇದು ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟ ಹಾಗೂ ವಿಚಿತ್ರ ಪರ್ವತ.. ಇದನ್ನು ನಾವು ತಿನ್ನಬಬಹುದು.. ಇದರ ಕಾಮನಬಿಲ್ಲಿನ ರಂಗನ್ನು ನೋಡಿ ಆನಂದಿಸಬಹುದು.. ವಿಚಿತ್ರ ಅನಿಸಿದರೂ ಇದು ನಿಜ..
ಹೌದು, ಈ ಪರ್ವತದ ಹೆಸರು ಹಾರ್ಮುಜ್.. ಇರಾನ್‌ನಲ್ಲಿರುವ ಈ ಪರ್ವತ ಎಲ್ಲರನ್ನೂ ಆಕರ್ಷಿಸುತ್ತಿದೆ.. ಭೂ ವಿಜ್ಞಾನಿಗಳ ಪಾಲಿಗೆ ಇದು ಡಿಸ್ನಿಲ್ಯಾಂಡ್ ಇದ್ದಂತೆ..! ಇಲ್ಲಿನ ಬರುವವರು ಈ ಪರ್ವತದ ಮಣ್ಣಿನ ರುಚಿ ನೋಡಿಯೇ ಮುಂದೆ ಸಾಗುತ್ತಾರೆ.. ಈ ಬೆಟ್ಟದ ಅಡಿಯಲ್ಲಿ ಕೆಂಪು ಅಲೆಗಳನ್ನು ಹೊತ್ತು ತರುವ ಸಮುದ್ರದ ಸೌಂದರ್ಯವನ್ನು ಸವಿಯುವುದೇ ಒಂದು ಆನಂದ. ಈ ದೃಶ್ಯಾವಳಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸದೇ ಇರದು.
ಬರೀ ಖನಿಜಗಳಿಂದ ಕೂಡಿರುವ ಈ ಪ್ರದೇಶ ಒಂದು ರೀತಿಯಲ್ಲಿ ನಿಗೂಢವಾಗಿ, ವಿಚಿತ್ರವಾಗಿ ಕಾಣುತ್ತದೆ. ಇರಾನ್ ಕರಾವಳಿಯಿಂದ ಸುಮಾರು 8 ಕಿಮೀ ದೂರದಲ್ಲಿ, ಕಣ್ಣೀರಿನ ಆಕಾರದ ಹಾರ್ಮುಜ್ ಪರ್ಷಿಯನ್ ಕೊಲ್ಲಿಯ ಕಡು ನೀಲಿ ನೀರಿನ ನಡುವೆ ಉಪ್ಪು ಗುಮ್ಮಟದಂತೆ ಕಾಣುತ್ತದೆ. ಮೇಪಲ್, ಜೇಡಿಮಣ್ಣು ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ಜ್ವಾಲಾಮುಖಿ ಬಂಡೆಗಳಿಂದ ತುಂಬಿದ ಇದು ಕೆಂಪು, ಹಳದಿ ಮತ್ತು ಕಿತ್ತಳೆ ಬಣ್ಣದಲ್ಲಿ ಹೊಳೆಯುತ್ತದೆ. 70 ಕ್ಕೂ ಹೆಚ್ಚು ಖನಿಜಗಳು ಇಲ್ಲಿ ಕಂಡುಬರುತ್ತವೆ. ಆ ಖನಿಜಗಳೇ ಈ ಬಣ್ಣಗಳಿಗೆ ಕಾರಣ.
ಇಷ್ಟು ಬಣ್ಣಗಳು ಹಾಗೂ ಉಪ್ಪು ಗೋಪುರಗಳು ಹೇಗೆ ಏರ್ಪಟ್ಟವು..?
ಒಟ್ಟು 42 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಒಳಗೊಂಡಿರುವ ಹಾರ್ಮುಜ್‌ನ ಪ್ರತಿ ಇಂಚು ಅದರ ಹೊರಹೊಮ್ಮುವಿಕೆಯ ಕಥೆಯನ್ನು ಹೇಳುತ್ತದೆ. ಬ್ರಿಟಿಷ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಧಾನ ಭೂವಿಜ್ಞಾನಿ ಡಾ. ಕ್ಯಾಥರೀನ್ ಗುಡ್‌ನಫ್, ಹಾರ್ಮುಜ್‌ನಲ್ಲಿನ ಬಣ್ಣಗಳ ಕಾರಣಗಳನ್ನು ವಿವರಿಸಿದರು. ಗುಡ್‌ನಫ್ ಹಿಂದೆ ಇರಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ಮಿಲಿಯನ್ ವರ್ಷಗಳ ಹಿಂದೆ ಪರ್ಷಿಯನ್ ಕೊಲ್ಲಿಯ ತೀರದಲ್ಲಿ ಸಮುದ್ರದಿಂದ ಅಲೆಗಳ ಮೂಲಕ ಬಂದ ಉಪ್ಪು ಶೇಖರಣೆಯಾಗುತ್ತದೆ. ಈ ಉಪ್ಪು ಅಲ್ಲಿನ ಖನಿಜಯುಕ್ತ ಜ್ವಾಲಾಮುಖಿಯೊಂದಿಗೆ ಸೇರಿ ಬಣ್ಣಬಣ್ಣದ ದಿಬ್ಬಗಳಾಗಿ ಬದಲಾಗುತ್ತದೆ.
ಇದು ತಿನ್ನಬಹುದಾದ ಪರ್ವತ..!
ಇದಕ್ಕೆ ಮತ್ತೊಂದು ವಿಶೇಷ ಕೂಡಾ ಇದೆ.. ಇಲ್ಲಿ ಇರುವ ಒಂದು ಪರ್ವತದ ಮಣ್ಣಿನ ರುಚಿ ನೋಡಬಹುದು. ಹೀಗಾಗಿ ಪ್ರಪಂಚದಲ್ಲಿರುವ ತಿನ್ನಬಹುದಾದ ಪರ್ವತ ಇದೊಂದೇ ಎಂದು ತಜ್ಞರು ಭಾವಿಸುತ್ತಿದ್ದಾರೆ. ಈ ಪರ್ವತದ ಮೇಲಿರುವ ಕೆಂಪಗಿರುವ ಮಣ್ಣನ್ನು ಗೆಲಾಕ್ ಎಂದು ಕರೆಯುತ್ತಾರೆ. ಇದು ಹೆಮಟೈಟ್ ಎಂಬ ಕಬ್ಬಿಣದ ಆಕ್ಸೈಡ್‌ನಿಂದ ಏರ್ಪಟ್ಟಿದೆ. ಈ ದ್ವೀಪದಲ್ಲಿನ ಅಗ್ನಿಪರ್ವತ ಶಿಲೆಗಳಿಂದ ಇದು ಹುಟ್ಟಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಮೌಲ್ಯಯುತ ಖನಿಜದಿಂದ ಹಲವಾರು ಪ್ರಯೋಜನಗಳಿವೆ. ಸ್ಥಳೀಯ ಅಡುಗೆಗಳಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸಾಂಬಾರಿನಲ್ಲಿ ಇದನ್ನು ಮಸಾಲಾ ರೀತಿಯಲ್ಲಿ ಬಳಸುತ್ತಾರೆ. ಖಾದ್ಯಗಳಲ್ಲಿ ಇದು ಮಣ್ಣಿನ ಸುವಾಸನೆ ಸೂಸುವಂತೆ ಮಾಡುತ್ತದೆ. ಸ್ಥಳೀಯವಾಗಿ ಸಿಗುವ ಬ್ರೆಡ್ ತೊಮ್ಷಿ ಜೊತೆ ತಿನ್ನಲು ಇದು ತುಂಬಾ ರುಚಿಕರವಾಗಿರುತ್ತದಂತೆ.
ಈ ಕೆಂಪು ಮಣ್ಣನ್ನು ಸಾಸ್ ರೀತಿಯಲ್ಲಿ ಕೂಡಾ ಬಳಸುತ್ತಾರೆ. ಇದನ್ನು ಇಲ್ಲಿ ಸೂರಖ್ ಎಂದು ಕರೆಯುತ್ತಾರೆ. ಬ್ರೆಡ್ ಮೇಲೆ ಇದನ್ನು ಜಾಮ್ ಅಥವಾ ಸಾಸ್ ರೀತಿಯಲ್ಲಿ ಬಳಿಯಲಾಗುತ್ತದೆ. ಇದು ಬಹುತೇಕ ಚೆನ್ನಾಗಿ ಬೆಂದ ರೀತಿಯಲ್ಲಿ ಇರುತ್ತದೆ. ಅಡುಗೆಯಲ್ಲಷ್ಟೇ ಅಲ್ಲ, ಸ್ಥಳೀಯ ಕಲಾವಿದರು ಇದನ್ನು ವರ್ಣಚಿತ್ರಗಳಿಗೆ ಬಣ್ಣವಾಗಿ ಕೂಡಾ ಬಳಸುತ್ತಾರೆ. ಡೈ ಹಾಕುವುದಕ್ಕೆ, ಪಿಂಗಾಣಿ ಪಾತ್ರೆಗಳ ಮೇಲೆ ಡಿಸೈನ್ ಮಾಡುವುದಕ್ಕೆ, ಕಾಸ್ಮೆಟಿಕ್ಸ್‌ನಲ್ಲಿ ಕೂಡಾ ಇದನ್ನು ಬಳಸುತ್ತಾರೆ.
ಈ ಕೆಂಪು ಬಣ್ಣದ ಪರ್ವತವಷ್ಟೇ ಅಲ್ಲದೆ ಹಾರ್ಮುಜ್‌ನಲ್ಲಿ ನೋಡಲೇಬೇಕಾದ ಸ್ಥಳಗಳು ತುಂಬಾನೇ ಇವೆ. ಈ ಪರ್ವತವನ್ನು ಉಪ್ಪು ದೇವತೆ ಎಂದೇ ಕರೆಯುತ್ತಾರೆ. ಕಿಲೋಮೀಟರ್‌ಗಳು ಹೆಚ್ಚು ವಿಸ್ತರಿಸಿರುವ ಈ ಪರ್ವತದ ಅಂಚುಗಳು ತುಂಬಾನೇ ಹರಿತವಾಗಿರುತ್ತವೆ. ಉಪ್ಪು ಸ್ಫಂಟಿಕದಂತೆ ಹೊಳೆಯುತ್ತಿರುತ್ತದೆ. ದೊಡ್ಡ ಹಾಲುಕಲ್ಲಿನ ಭವನದಂತೆ ಕಾಣುತ್ತದೆ. ಇದಕ್ಕೆ ಔಷಧಿ ಗುಣಗಳಿವೆ ಎಂದು ಸ್ಥಳೀಯರು ನಂಬುತ್ತಾರೆ. ನಮ್ಮ ಶರೀರದಲ್ಲಿನ ನೆಗೆಟಿನ್ ಎನರ್ಜಿಯನ್ನು ದೂರ ಮಾಡುತ್ತವೆ ಎಂದು ಸ್ಥಳೀಯರು ನಂಬಿದ್ದಾರೆ. ಈ ಕಲ್ಲು ಉಪ್ಪು ಪಾಸಿಟಿವ್ ಎನರ್ಜಿ ನೀಡುತ್ತದೆ. ಕೆಲಹೊತ್ತು ಇಲ್ಲಿ ಕಾಲಕಳೆದರೆ ನಮಗೆ ಹೊಸ ಉಲ್ಲಾಸ ಸಿಗುತ್ತದೆ. ಮನಸ್ಸು ಆಹ್ಲಾದವೆನಿಸುತ್ತದೆ. ಹೊಸ ಚೈತನ್ಯ ನೀಡುತ್ತದೆ.. ಅದಕ್ಕೇ ಇದನ್ನು ಎನರ್ಜಿ ವ್ಯಾಲಿ ಅಂತಾನೂ ಕರೆಯುತ್ತಾರೆ.
ಅದೇ ರೀತಿಯಲ್ಲಿ ನೈರುತ್ಯದಲ್ಲಿ ಇಂದ್ರಧನಸ್ಸು ಕಣಿವೆ ಇದೆ. ಹಲವಾರು ಬಣ್ಣಗಳಲ್ಲಿ ಈ ಕಣಿವೆ ಹೊಳೆಯುತ್ತಿರುತ್ತದೆ. ಕೆಂಪು, ಅರಶಿಣ, ನೀಲಿ ಹೀಗೆ ಹಲವಾರು ಬಣ್ಣಗಳಲ್ಲಿ ಇದು ಪ್ರಕಾಶಿಸುತ್ತಿರುತ್ತದೆ. ಸೂರ್ಯನ ಕಿರಣಗಳು ತಾಕುತ್ತಿದ್ದಂತೆ ಇದರ ಮೇಲೆ ಹೊಸ ಹೊಸ ಆಕಾರಗಳು ಏರ್ಪಡುತ್ತವೆ. ಇದರ ಪಕ್ಕದಲ್ಲೇ ವಿಗ್ರಹಗಳ ಕಣಿವೆ (ವ್ಯಾಲಿ ಆಫ್ ಸ್ಟ್ಯಾಚ್ಯೂಸ್)ಯಲ್ಲಿ ಸಾವಿರಾರು ವರ್ಷಗಳಿಂದ ಬೀಸಿದ ಗಾಳಿಯಿಂದಾಗಿ ಕಲ್ಲುಗಳು ಅದ್ಭುತವಾದ ಆಕೃತಿಗಳಾಗಿ ಬದಲಾಗಿವೆ. ಪಕ್ಷಿಗಳ ರೀತಿಯಲ್ಲಿ, ಡ್ರ್ಯಾಗನ್‌ಗಳ ರೀತಿಯಲ್ಲಿ, ವಿಚಿತ್ರ ರೀತಿಯ ಆಕೃತಿಗಳಲ್ಲಿ ದರ್ಶನ ನೀಡುತ್ತವೆ. ಪ್ರಕೃತಿಯೇ ಸೃಷ್ಟಿ ಮಾಡಿರುವ ಕಲಾರೂಪಗಳಿವು.
ಪ್ರಪಂಚ ಯಾತ್ರಿಕರಿಗೆ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ..!
ಇಷ್ಟು ಅಂಧವಾದ, ನಾನಾ ವರ್ಣಗಳಿಂದ ಕೂಡಿದ ಕಣಿವೆ ಬಗ್ಗೆ ತುಂಬಾ ಜನಕ್ಕೆ ಗೊತ್ತೇ ಇಲ್ಲ. ೨೦೧೯ರಲ್ಲಿ ಕೇವಲ ೧೮ ಸಾವಿರ ಮಂದಿ ಮಾತ್ರವೇ ಈ ಕಣಿವೆಗೆ ಭೇಟಿ ಕೊಟ್ಟಿದ್ದಾರೆ ಎಂದು ಇರಾನ್ ಪೋರ್ಟ್ಸ್ ಅಂಡ್ ಮಾರಿಟೈಮ್ ಆರ್ಗನೈಸೇಷನ್ ಹೇಳಿದೆ. ಚಾರಿತ್ರಿಕವಾದ ಸಹಜಸಿದ್ಧವಾದ ಪ್ರತ್ಯೇಕ ಆರ್ಷಣೆಯಾಗಿರುವ ಈ ಪ್ರಾಂತ್ಯದ ಬಗ್ಗೆ ಹೆಚ್ಚಿನ ಜನಕ್ಕೆ ಪೂರ್ತಿಯಾಗಿ ಗೊತ್ತಿಲ್ಲ. ಹಾರ್ಮೂಜ್ ನಲ್ಲಿ ಮೂಲಸೌಕರ್ಯಗಳು ಹೆಚ್ಚಾದರೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಸ್ಥಳೀಯರು ಇಲ್ಲಿಗೆ ಬರುವ ಪ್ರವಾಸಿಗರಿಗೆ ತಮ್ಮ ಮನೆಯಲ್ಲಿ ಮಾಡಿದ ಖಾದ್ಯಗಳನ್ನು ಉಣಬಡಿಸುತ್ತಾರೆ. ರಿಕ್ಷಾಗಳು, ಮೋಟಾರು ಬೈಕ್‌ಗಳ ಮೇಲೆ ದ್ವೀಪದ ಸುತ್ತಲೂ ಕರೆದುಕೊಂಡು ಹೋಗಿ ತೋರಿಸುವುದು ಮಾಡುತ್ತಿದ್ದಾರೆ. ಹಾರ್ಮೂಜ್ ಗಾಗಿ ನಾವಿದನ್ನೆಲ್ಲಾ ಮಾಡುವುದು ನಮ್ಮ ಕರ್ತವ್ಯ. ಇದು ಎಷ್ಟೋ ವಿಶೇಷವಾದ ಪ್ರದೇಶ. ಪರಿಸರಪ್ರಿಯವಾದ ಈ ಪ್ರದೇಶವನ್ನು ಪ್ರಪಂಚದ ದೃಷ್ಟಿಗೆ ತರುವುದಕ್ಕೆ ತಕ್ಷಣ ಸಹಕಾರ ನೀಡಬೇಕಾದ ಅವಶ್ಯಕತೆ ಇದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.