ಕೀವ್‌ನತ್ತ ರಷ್ಯಾ ಯುದ್ಧ ಟ್ಯಾಂಕರ್‌ಗಳು-64ಕಿ.ಮೀ. ಉದ್ದದ ಕಾನ್ವಾಯ್ ಫೋಟೋ ವೈರಲ್
ಕೀವ್: ಉಕ್ರೇನ್ ರಾಜದಾನಿ ಕೀವ್ ನಗರವನ್ನು ವಶಪಡಿಸಿಕೊಳ್ಳಲು ರಷ್ಯಾ ಇನ್ನಿಲ್ಲದ ಪ್ರಯತ್ನವನ್ನು ಮಾಡ್ತಿದೆ. ಆದ್ರೆ ಉಕ್ರೇನ್ ರಷ್ಯಾಗೆ ಸೆಡ್ಡು ಹೊಡೆಯುತ್ತಾ ನಿಂತಿದೆ. ಏನಾದರೂ ಮಾಡಿ ಕೀವ್ ಕೈವಶ ಮಾಡಿಕೊಳ್ಳಲು ಭಾರೀ ಯುದ್ಧ ಟ್ಯಾಂಕರ್‌ಗಳ ಕಾನ್ವಾಯ್ ಅನ್ನು ರಷ್ಯಾ ಉಕ್ರೇನ್‌ಗೆ ನುಗ್ಗಿಸುತ್ತಿದೆ.
ರಷ್ಯಾ ಸೇನೆಯು 64 ಕಿಲೋಮೀಟರ್ ಉದ್ದದ ಸಶಸ್ತ್ರ ಬೆಂಗಾವಲು ಪಡೆಯೊಂದಿಗೆ ಉಕ್ರೇನ್ ರಾಜಧಾನಿಯನ್ನು ಸುತ್ತುವರಿಯಲು ಮುಂದಾಗಿದೆ. 64 ಕಿಲೋಮೀಟರ್ ಉದ್ದದ ರಷ್ಯಾದ ಸೇನಾ ಬೆಂಗಾವಲು ಪಡೆ ಕೀವ್ ಕಡೆಗೆ ಸಾಗುತ್ತಿರುವ ಉಪಗ್ರಹ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸೇನಾ ಬೆಂಗಾವಲು ಪಡೆಯಲ್ಲಿರುವ ಶಸ್ತ್ರಾಸ್ತ್ರಗಳು, ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಉಪಗ್ರಹ ಚಿತ್ರಣವನ್ನು ಆಧರಿಸಿ ಮ್ಯಾಕ್ಸರ್ ಟೆಕ್ನಾಲಜೀಸ್ ಗುರುತಿಸಲಾಗಿದೆ.
ಉಕ್ರೇನ್ ಮೇಲೆ ದೊಡ್ಡ ಪ್ರಮಾಣದ ದಾಳಿ ಮಾಡಲು ರಷ್ಯಾ ತಯಾರಿ ನಡೆಸುತ್ತಿದೆ. ರಷ್ಯಾದ ಮುಂದೆ ಉಕ್ರೇನ್ ಪ್ರಾಬಲ್ಯ ಏನೂ ಅಲ್ಲ ಅಂದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಹೋರಾಡ್ತಿದೆ ಜೆಲೆನ್ಸ್ಕಿ ಪಡೆ. ಇದನ್ನು ಅರಗಿಸಿಕೊಳ್ಳಲಾಗದ ರಷ್ಯಾ ತನ್ನ ಕಾನ್ವಾಯ್ ಅನ್ನು ಕೀವ್‌ಗೆ ನುಗ್ಗಿಸುತ್ತಿದೆ. ಯುಎಸ್ ತಂತ್ರಜ್ಞಾನ ಕಂಪನಿ ಮ್ಯಾಕ್ಸರ್ ಟೆಕ್ನಾಲಜೀಸ್ ತೆಗೆದ ಉಪಗ್ರಹ ಚಿತ್ರಗಳು ರಷ್ಯಾದ ಸೈನ್ಯದ 64-ಕಿಲೋಮೀಟರ್ ಬೆಂಗಾವಲು ಪಡೆ ಸಾಗುತ್ತಿರುವ ಚಿತ್ರವನ್ನು ಕ್ಯಾಪ್ಚರ್ ಮಾಡಿವೆ.