International

ಬಾರ್ಜ್‌ಗೆ ಬೆಂಕಿ: 32 ಮಂದಿ ದುರ್ಮರಣ

ಢಾಕಾ: ಬಾಂಗ್ಲಾದೇಶದ ನದಿಯೊಂದರಲ್ಲಿ ಭಾರಿ ದುರಂತ ಸಂಭವಿಸಿದೆ. ಇಲ್ಲಿನ ನದಿಯೊಂದರಲ್ಲಿ ಬಾರ್ಜ್‌ನಲ್ಲಿ ಪ್ರಯಾಣಿಕರು ಹಾಗೂ ಸರಕುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ದುರಂತದಲ್ಲಿ 32ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಬಾಂಗ್ಲಾದೇಶದ ನದಿಯೊಂದರಲ್ಲಿ ಈ ದುರಂತ ಸಂಭವಿಸಿದೆ. ಮೂರು ಮಹಡಿ ಬಾರ್ಜ್‌ ಇದಾಗಿದ್ದು, ಬಾರ್ಜ್‌ ನದಿಯ ಮಧ್ಯ ಭಾಗದಲ್ಲಿದ್ದಾಗ ಬೆಂಕಿ ದುರ್ಘಟನೆ ಸಂಭವಿಸಿದೆ. ಈಗಾಗಲೇ 32 ಮೃತದೇಹಗಳನ್ನು ಬಾರ್ಜ್‌ನಿಂದ ಹೊರತೆಗೆಯಲಾಗಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವರು ಬೆಂಕಿಯಿಂದಾಗಿ ನದಿಗೆ ಹಾರಿ ಈಜಲಾಗದೇ ಸಾವನ್ನಪ್ಪಿದ್ದಾರೆ. ಬದುಕುಳಿದು ಬಂದವರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

Share Post