International

ಎರಡು ನೌಕಾಪಡೆ ಹೆಲಿಕಾಪ್ಟರ್‌ಗಳ ಪತನ; 10 ಮಂದಿ ದುರ್ಮರಣ!

ಮಲೇಷ್ಯಾ; ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಪತನವಾಗಿದ್ದು, ಹತ್ತು ಮಂದಿ ಸಾವನ್ನಪ್ಪಿದ್ದಾರೆ.. ಮಲೇಷ್ಯಾದಲ್ಲಿ ಈ ದುರ್ಘಟನೆ ನಡೆದಿದೆ..

ಎರಡು ಸೇನಾ ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ನಡೆದಿದೆ.. ಪೆರಾಕ್​ನ ಲುಮುಟ್​ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ ಹೆಲಿಕಾಪ್ಟರ್​ಗಳು ಡಿಕ್ಕಿ ಹೊಡೆದುಕೊಂಡಿದ್ದು, ಧರೆಗುರುಳಿವೆ.. ಇದರಿಂದಾಗಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ..

ಮೃತದೇಹಗಳನ್ನು ಹೆಲಿಕಾಪ್ಟರ್​ಗಳಿಂದ ಹೊರ ತೆಗೆಯುವ ಕೆಲಸ ನಡೆಯುತ್ತಿದೆ..

 

Share Post