International

UKRAINE-RUSSIA WAR: ಬಂಕರ್ ನಲ್ಲಿ ಕುಳಿತ ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ

ಕೀವ್: ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಆವರಿಸಿದೆ. ಕೀವ್‌ನ ಓಬೊಲೋನ್ ಪ್ರದೇಶದಿಂದ ರಷ್ಯಾ ಸೇನೆ ಉಕ್ರೇನ್ ರಾಜಧಾನಿಗೆ ಎಂಟ್ರಿ ಕೊಟ್ಟಿದೆ. ಇಷ್ಟೆಲ್ಲಾ ಆದರೂ ನಾನು ಕೀವ್ ನಗರ ಬಿಟ್ಟು ಹೋಗಲ್ಲ ಎನ್ನುತ್ತಿದ್ದ ಉಕ್ರೇನ್ ಅಧ್ಯಕ್ಷ ಲೋಮೊಡಿನ್ ಜೆಲೆನ್ ಸ್ಕಿ ಅವರು ರಷ್ಯಾ ಸೇನೆಯಿಂದ ತಪ್ಪಿಸಿಕೊಳ್ಳಲು ಬಂಕರ್ ನಲ್ಲಿ ಅವಿತು ಕುಳಿತಿದ್ದಾರೆ.

ಆರಂಭ ಶೂರತ್ವ ತೋರಿ ರಷ್ಯಾ ವಿರುದ್ಧ ಆರ್ಭಟಿಸಿದ ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಅವರು ಈಗ ರಷ್ಯಾ ಜೊತೆ ಮಾತುಕತೆಗೆ ತಾನು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ. ಹಾಗೆಯೇ ರಷ್ಯಾ ಕೂಡ ತಾನು ಮಾತುಕತೆಗೆ ಸಿದ್ಧ ಎಂದು ಸಕರಾತ್ಮಕವಾಗಿ ಸ್ಪಂದಿಸಿದೆ.

ಕೀವ್ ನಗರದಲ್ಲಿ ಎಲ್ಲೆಲ್ಲೂ ರಷ್ಯಾ ಸೇನಾ ಸಿಬ್ಬಂದಿ ಕಾಣುವ ಪರಿಸ್ಥಿತಿ ಎದುರಾಗಿರುವ ಕಾರಣ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ ಎಂದು ಉಕ್ರೇನ್ ಆಡಳಿತ ಲಾಕ್ರೋನ್ ರೋಡ್ ನಲ್ಲಿರುವ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಹಂಚಿಕೆ ಮಾಡುತ್ತಿದೆ.

ರಷ್ಯಾ ಸೇನೆ ಕೀವ್ ಸೇರಿದಂತೆ ಹಲವು ನಗರಗಳ ವಸತಿ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಕಾರಣದಿಂದ ಬಹಳಷ್ಟು ಅಪಾರ್ಟ್ ಮೆಂಟ್ ಗಳು ಧರಶಾಯಿ ಸ್ಥಿತಿಯಲ್ಲಿದೆ. ಕೆಲವು ಅಪಾರ್ಟ್ ಮೆಂಟ್ ಗಳಿಂದ ಜನರು ಖಾಲಿ ಮಾಡಿದ್ದಾರೆ.

Share Post