CrimeDistricts

ಮಹಿಳೆಗೆ ಕಪಾಳಮೋಕ್ಷ ಮಾಡಿದ ಬ್ಯಾಂಕ್ ರಿಕವರಿ ಸಿಬ್ಬಂದಿ

ಬಾಗಲಕೋಟೆ; ಬ್ಯಾಂಕ್ ನಿಂದ ಪಡೆದ ಸಾಲ ವಾಪಸ್ ಪಡೆಯೋದಕ್ಕೆ ಕಾನೂನಿನಡಿ ಹಲವಾರು ದಾರಿಗಳಿವೆ.. ಆ ಮೂಲಕವೇ ವಸೂಲಿ ಮಾಡಬೇಕು.. ಆದ್ರೆ ಬ್ಯಾಂಕ್ ರಿಕವರಿ ಏಜೆಂಟ್ ಗಳು ಗೂಂಡಾಗಳಂತೆ ವರ್ತನೆ ಮಾಡುತ್ತಾರೆ.. ಮನೆ ಬಳಿ ಬಂದು ಧಮಕಿ ಹಾಕುತ್ತಾರೆ.. ಇಲ್ಲಿ ಅದನ್ನೂ ಮೀರಿ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ಜೋಗಿಮಡ್ಡಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.. ಖಾಸಗಿ ಬ್ಯಾಂಕ್ ಒಂದರ ರಿಕವರಿ ಸಿಬ್ಬಂದಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಜೇಸಾಬ್ ಎಂಬಾತ ಸಾಲ ರಕವರಿಗೆ ಬಂದಿದ್ದು, ಈ ವಾಕ್ಸಮರ ನಡೆದಿದೆ. ಇದೇ ವೇಳೆ ರಾಜೇಸಾಬ್ ಸಾಲ ತೆಗೆದುಕೊಂಡಿದ್ದ ರುಕ್ಸಾನಾ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ.

ಇನ್ನು ಬ್ಯಾಂಕ್ ರಿಕವರಿ ಸಿಬ್ಬಂದಿ‌ ಮೊಬೈಲ್ ಕೂಡಾ ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

 

Share Post