CrimeDistricts

ವಿಷ ಆಹಾರ ಸೇವಿಸಿ 20ಕ್ಕೂ ಹೆಚ್ಚು ಕುರಿಗಳು ಸಾವು: ಮಾಲೀಕ ಕಂಗಾಲು

ತುಮಕೂರು: ಬೆಳಗ್ಗೆಯಿಂದ ಆಚೆ ಹುಲ್ಲು ಮೇಯ್ದುಕೊಂಡ ಬಂದ ಕುರಿಗಳು ಬೆಳಗಾಗುವುದರೊಳಗೆ ಮೆಲೇಲದೆ ಹೊಟ್ಟೆ ಊದಿಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿಯಲ್ಲಿ ನಡೆದಿದೆ. ಕುರಿಗಳನ್ನು ಕಳೆದುಕೊಂಡ ಮಾಲೀಕ ತಲೆಮೇಲೆ ಕೈ ಹಿತ್ತು ಕುಳಿತು ಕಣ್ಣೀರು ಹಾಕುತ್ತಿದ್ದಾರೆ.

ಚಿಕ್ಕತಿಮ್ಮನಹಟ್ಟಿಯ ಚಿಕ್ಕಣ್ಣ ಎಂಬುವವರಿಗೆ ಸೇರಿದ  ಕುರಿಗಳು ನಿನ್ನೆ ಬೆಳಗ್ಗೆ ಮೇಯಲು ಆಚೆ ಹೋಗಿವೆ ಎಂದಿನಂತೆ ಬಂದು ಕರಿ ರಪ್ಪ ಸೇರಿವೆ. ಆದರೆ ಬೆಳಗಾಗುವುದರೊಳಗೆ 20 ಕುರಿಗಳು ಹೊಟ್ಟೆ ಊದಿಕೊಂಡು ಸಾವನ್ನಪ್ಪಿವೆ. ಕುರಿಗಳಿಗೆ ವಿಷ ಆಹಾರ ಸೇವನೆ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೇವಲ ಕುರಿಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ರೈತ ಇದೀಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.

ಸ್ಥಳಕ್ಕೆ ಪಾವಗಡ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುರಿಗಳು ಹೇಗೆ ಸತ್ತಿವೆ ಎಂಬುದನ್ನು ತಿಳಿದುಕೊಳ್ಳಲು ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ಕುರಿ ಹೊಟ್ಟೆಯನ್ನು ಬಗೆದು ಅದರಲ್ಲಿ ಏನಿರಬಹುದು ಎಂಬುದನ್ನು ಪರೀಕ್ಷೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

Share Post