ಆ ದಿನ ರಷ್ಯಾ ನಮ್ಮ ಮೇಲಿನ ಯುದ್ಧವನ್ನು ನಿಲ್ಲಿಸುತ್ತೆ..!-ಉಕ್ರೇನ್ ಸೇನೆ ಬಹಿರಂಗಪಡಿಸಿದ ಕುತೂಹಲಕಾರಿ ವಿಷಯ
ಉಕ್ರೇನ್: ರಷ್ಯಾ ಉಕ್ರೇನ್ ನಡುವಿನ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ ಫೆಬ್ರವರಿ 4ರಂದು ಶುರುವಾದ ಯುದ್ಧ ಒಂದು ತಿಂಗಳು ಕಳೆದರೂ ನಡೆಯುತ್ತಲೇ ಇದೆ. ಈಗಾಗಲೇ ಎರಡೂ ದೇಶದವರು ಭಾರೀ ನಷ್ಟವನ್ನು ಅನುಭಸಿದ್ದಾರೆ. ಯುದ್ಧ ನಿಲ್ಲಿಸುವಂತೆ ಜಗತ್ತಿನ ಇತರೆ ದೇಶಗಳು, ಅಂತರಾಷ್ಟ್ರೀಯ ನ್ಯಾಯಾಲಯ ಸೇರಿದಂತೆ ಯಾರೂ ಹೇಳಿದರೂ ರಷ್ಯಾ ಮಾತ್ರ ಯುದ್ಧವನ್ನು ನಿಲ್ಲಿಸುತ್ತಿಲ್ಲ. ಇದೀಗ ಆದಿನ ರಷ್ಯಾ ತನ್ನ ಯುದ್ಧವನ್ನು ನಿಲ್ಲಿಸಬಹುದು ಎಂಬ ಮಾತನ್ನು ಉಕ್ರೇನ್ ಸೇನೆ ಹೇಳಿಕೊಂಡಿದೆ.
ಮೇ 9 ರಂದು ಉಕ್ರೇನ್ ವಿರುದ್ಧದ ತನ್ನ ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಆಶಿಸುತ್ತಿದೆ ಎಂದು ಉಕ್ರೇನಿಯನ್ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಅಂದರೆ, ಆ ದಿನ ರಷ್ಯಾಕ್ಕೆ ಒಂದು ವಿಶೇಷತೆ ಇದೆ ಎಂದು ವರದಿಗಳು ಹೇಳುತ್ತವೆ. ಜರ್ಮನಿಯ ನಾಜಿಗಳ ವಿರುದ್ಧದ ವಿಜಯವನ್ನು ಗುರುತಿಸಲು ರಷ್ಯಾ ಮೇ 9 ರಂದು ದೇಶಾದ್ಯಂತ ವಿಜಯ ದಿನವನ್ನು ಆಚರಿಸುತ್ತದೆ. ಅದೇ ದಿನ ಉಕ್ರೇನ್ ಮೇಲಿನ ಯುದ್ಧದ ಅಂತ್ಯದ ಬಗ್ಗೆ ರಷ್ಯಾದ ಸೇನೆಯು ಅಧಿಕೃತ ಹೇಳಿಕೆಯನ್ನು ನೀಡುವ ಸಾಧ್ಯತೆಯಿದೆ ಎಂದು ಉಕ್ರೇನಿಯನ್ ಸೇನೆ ಭವಿಷ್ಯ ನುಡಿದಿದೆ.
ವಿಕ್ಟರಿ ಡೇ 1945 ರಲ್ಲಿ ಗ್ರೇಟರ್ ಜರ್ಮನ್ ರೀಚ್ನ ಶರಣಾಗತಿಯ ನೆನಪಿಗಾಗಿ ರಜೆ ಘೋಷಿಸಲಾಗಿದೆ. ವಿಶ್ವ ಸಮುದಾಯ ಮತ್ತು ನ್ಯಾಟೋ ಸದಸ್ಯ ರಾಷ್ಟ್ರಗಳ ಪ್ರಯತ್ನಗಳ ಹೊರತಾಗಿಯೂ ರಷ್ಯಾದ ಅಧ್ಯಕ್ಷರು ಉಕ್ರೇನ್ ಮೇಲಿನ ಯುದ್ಧದಿಂದ ಹಿಂದೆ ಸರಿದಿಲ್ಲ. ಆದರೆ ರಷ್ಯಾದಿಂದ ಬಂದ ವರದಿಗಳ ಮೇರೆಗೆ ಮೇ 9 ಕ್ಕೆ ಯುದ್ಧವನ್ನು ಕೊನೆಗೊಳಿಸುವ ಮಾಹಿತಿಯಿದೆ.