ನಿವೃತ್ತಿ ಘೋಷಣೆ ಮಾಡಿದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್!
ನವದೆಹಲಿ; ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಇದ್ದಕ್ಕಿದ್ದಂತೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.. ಆರಂಭಿಕ ಆಟಗಾರರಾದ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.. ಸಾಮಾಜಿಕ ಜಾಲತಾಣದ ಮೂಲಕ ಅವರು ಈ ವಿಚಾರ ತಿಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ..
ಇದನ್ನೂ ಓದಿ; ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗುತ್ತಾ..?; ಬದಲಾದರೆ ಡಿಕೆಶಿಗೆ ಯಾವ ಹುದ್ದೆ..?
2022ರ ಬಾಂಗ್ಲಾದೇಶ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಶಿಖರ್ ಧವನ್ ಸ್ಥಾನ ಪಡೆದಿದ್ದರು.. ಅನಂತರ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ.. ಇನ್ನು ದುಲೀಪ್ ಟ್ರೋಫಿಗೆ ಆಯ್ಕೆ ಮಾಡಿದ ತಂಡಗಳಲ್ಲೂ ಅವರನ್ನು ಪರಿಗಣಿಸಿರಲಿಲ್ಲ.. ಈ ಹಿನ್ನೆಲೆಯಲ್ಲಿಯೇ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ದೇಶಕ್ಕಾಗಿ ಆಡಿದ್ದೇನೆ ಎಂಬ ತೃಪ್ತಿ ನನಗಿದೆ. ನನ್ನನ್ನು ಬೆಂಬಲಿಸಿದವರೆಲ್ಲರಿಗೂ ಧನ್ಯವಾದಗಳು ಎಂದು ಶಿಖರ್ ಧವನ್ ಹೇಳಿಕೊಂಡಿದ್ದಾರೆ..
ಇದನ್ನೂ ಓದಿ; 2 ತಿಂಗಳ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ ಫಿಕ್ಸ್!?
ಶಿಖರ್ ಧವನ್ ಅವರು 2010ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.. ಟೀಂ ಇಂಡಿಯಾ ಆರಂಭಿಕ ಆಟಗಾರನಾಗಿ ಅವರು 167 ಏಕದಿನ ಪಂದ್ಯಗಳನ್ನು ಆಡಿದ್ದಾರೆ.. ಏಕದಿನ ಪಂದ್ಯಗಳಲ್ಲಿ ಅವರು 17 ಶತಕಗಳನ್ನು ಬಾರಿಸಿದ್ದು, 6700 ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ.. ಇನ್ನು 34 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7 ಶತಕ ಹಾಗೂ 5 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.. ಶಿಖರ್ ಧವನ್ ಅವರು ಐಪಿಎಲ್ ನಲ್ಲಿ ಆಟ ಮುಂದುವರೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ಸುಂದರಿ ಪತ್ನಿಯ ಕೊಂದು ಮನೆಯಲ್ಲೇ ಕುಳಿತಿದ್ದ ಪಾಪಿ ಗಂಡ!